ದಾಂಡೇಲಿ : ಮನಸ್ಸಿಗೆ ಯಾವುದೋ ವಿಚಾರವನ್ನು ಹಚ್ಚಿಕೊಂಡು ಅದರಿಂದಾಗಿ ಮನನೊಂದು ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಟೌನಶಿಪ್‌ನ ರಾಘವೇಂದ್ರ ಮಠದ ಹತ್ತಿರದ ಮನೆಯೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಟೌನ್‌ಶಿಪ್‌ನ ನಿವಾಸಿ 42 ವರ್ಷ ವಯಸ್ಸಿನ ಸೋಗಿ ವಿಜಯ್ ನಂದಾ ಎಂಬವರೇ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಇವರು ತನ್ನ ಪತಿ ವಿಜಯ್ ಪಾಂಡುರಂಗ ಸೋಗಿಯವರಿಗೆ ಕಳೆದ ಎಂಟೊಂಬತ್ತು ತಿಂಗಳ ಹಿಂದೆ ಹೃದಯಾಘಾತವಾಗಿ, ಮಾತನಾಡಲು ಕಷ್ಟಸಾಧ್ಯವಾದ ಹಿನ್ನಲೆಯಲ್ಲಿ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಮನೆಯ ಸ್ನಾನಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.

ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಮಾಡಿದ ಮೃತದೇಹವನ್ನು ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಭವಿಷ್ಯದಲ್ಲಿ ತೀವ್ರ ಬರಗಾಲ, ಕಾಡ್ಗಿಚ್ಚಿನ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ