ಕುಮಟಾ:ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಂ. ಗೊನೇಹಳ್ಳಿಯವರು ರತ್ನಾಕರ ನಾರದ ಮುನಿಗಳ ಉಪದೇಶದಿಂದ ವಾಲ್ಮೀಕಿ ಮಹರ್ಷಿಯಾದರು, ಹಾಗೆಯೇ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ನಾವೆಲ್ಲರೂ ವಿದ್ಯಾರ್ಥಿಗಳಿಗೆ ವಾಲ್ಮೀಕಿಯಂತಹ ಮಹಾನ್ ಸಾಧು-ಸಂತರ, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಆಗಾಗ ಹೇಳಿ, ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಮೂಡಿಸಿದರೆ, ಅವರು ನಮ್ಮ ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.

RELATED ARTICLES  ಗಂಗಾವಳಿಯಲ್ಲಿ ಅದ್ಧೂರಿಯಾಗಿ ಜರುಗಿದ ಗಂಗಾಷ್ಟಮಿ ಉತ್ಸವ.

ಶಿಕ್ಷಕರಾದ ಶ್ರೀಧರ ಹೆಚ್. ಆರ್, ಶಿಕ್ಷಕಿ ಅನುಶ್ರೀ ಪಟಗಾರ ಮಹರ್ಷಿ ವಾಲ್ಮೀಕಿಯವರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಶ್ರೀಮತಿ ರಂಜನಾ ಆಚಾರ್ಯ ಪ್ರಾರ್ಥಿಸಿದರು ಮತ್ತು ಮಹರ್ಷಿ ವಾಲ್ಮೀಕಿಯವರ ಕುರಿತು ಉತ್ತಮ ಗೀತೆಯನ್ನು ಹಾಡಿದರು. ಶಿಕ್ಷಕಿ ಭಾರತಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪಲ್ಲವಿ ಸ್ವಾಗತಿಸಿದರು. ಶಿಕ್ಷಕಿ ಶ್ವೇತಾ ನಾಯ್ಕ ವಂದಿಸಿದರು. ಸಂಯೋಜಕರಾದ ಶ್ರೀಮತಿ ಅನುರಾಧಾ ವಿ. ಗುನಗ ಮತ್ತು ಗೀತಾ ಆರ್. ನಾಯ್ಕ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES  ಹೊಲನಗದ್ದೆ ಶಾಲೆಯಲ್ಲಿಆಕರ್ಷಕ ಕಲಿಕಾ ವಾತಾವರಣವಿದೆ- ಬಿ.ಸಿ.ನಾಗೇಶ.