ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತ ಪದ್ಮನಾಭ ದೇವಸ್ಥಾನದ ಸಸ್ಯಹಾರಿ ಮೊಸಳೆ ಎಂದೇ ಪ್ರಖ್ಯಾತಿ ಪಡೆದ ಬಬಿಯಾ ಹೆಸರಿನ ಮೊಸಳೆ ಸಾವನ್ನಪ್ಪಿದೆ. ಇದನ್ನು ದೇವತಾ ಸ್ವರೂಪಿ ಎಂದೇ ನಂಬಲಾಗಿತ್ತು. ಈ ಕ್ರೂರ ಪ್ರಾಣಿಯೂ ಭಕ್ತರ ನೆಚ್ಚಿನ ಪ್ರಾಣಿ ಎನಿಸಿಕೊಂಡಿದ್ದು, ದೈವತ್ವದ ಸಂಕೇತವಾಗಿತ್ತು ಎಂದೇ ಬಣ್ಣಿಸಲಾಗಿದೆ.

ಇದನ್ನೂ ಓದಿ – ಪೊಲೀಸರಿಗೇ ಅವಾಚ್ಯ ಶಬ್ದದಿಂದ ಬೈದು ರಂಪಾಟ : ಓರ್ವ ಅರೆಸ್ಟ್

RELATED ARTICLES  ದಾನದಿಂದ ನಮ್ಮ ಬದುಕಿಗೆ ಅಂತರಂಗ ವೈಭವ: ರಾಘವೇಶ್ವರ ಶ್ರೀ

ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಕಳೆದ 70 ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿದೆ ಈ ಮೊಸಳೆ ವಾಸವಾಗಿತ್ತು. ಈ ಬಬಿಯಾ ಮೊಸಳೆ ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ ಸ್ವೀಕರಿಸುತ್ತಿತ್ತು. ದೇವರ ಮೊಸಳೆ ಎಂದೇ ಇದು ಪ್ರಖ್ಯಾತಿ ‌ಪಡೆದಿತ್ತು.‌ ಎರಡು ವರ್ಷಗಳ ಹಿಂದೆ ನೀರಿನಿಂದ ಹೊರ ಬಂದು ದೇಗುಲ ಪ್ರವೇಶಿಸಿದ್ದ ಬಬಿಯಾ,‌ ಮೊದಲ ಬಾರಿಗೆ ದೇಗುಲದ ಆವರಣಕ್ಕೆ ಬಂದಿದ್ದು ಭಕ್ತರ ಅಚ್ಚರಿಗೆ ಕಾರಣವಾಗಿತ್ತು. ದೇವಸ್ಥಾನದ ಆವರಣದಲ್ಲಿ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಲಿದೆ.

RELATED ARTICLES  ಶ್ರೀಭಾರತೀ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಂಪನ್ನ