ಮೂರು ದಿನಗಳ ಹಿಂದೆ ರಸ್ತೆ ಮಾರ್ಗದಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಶನಿವಾರ ರಾತ್ರಿ ಗೋವಾಕ್ಕೆ ಕಾರವಾರದ ಮೂಲಕ ರಸ್ತೆ ಮಾರ್ಗದಲ್ಲಿ ವಾಪಸ್ ಆಗಿದ್ದಾರೆ. ಅವರಿಗಾಗಿ ಗೋವಾ ಗಡಿಯಿಂದ ಕಾರವಾರದವರೆಗೆ ಝೀರೋ ಟ್ರಾಫಿಕ್ ನೀಡಲಾಗಿದ್ದು, ಸಾರ್ವಜನಿಕ ವಾಹನಗಳನ್ನ ಒನ್ ವೇನಲ್ಲಿ ಬಿಡಲಾಗಿದೆ. ಹೀಗೆ ಒನ್ ವೇನಲ್ಲಿ ಬರುತ್ತಿದ್ದ ಲಾರಿಯವನೊಬ್ಬನಿಗೆ ಅಡ್ಡ ಹಾಕಿ, ಒನ್ ವೇನಲ್ಲಿ ಹೆ ಬಂದಿದ್ದೀಯಾ ಎಂದು ಯುವಕರಿಬ್ಬರು ಕಾರವಾರ ತಾಲೂಕಿನ ಮಾಜಾಳಿಯ ಘೋಟ್ರೇಬಾಗ್ ರಾಷ್ಟ್ರೀ ಹೆದ್ದಾರಿಯ ಬದಿಯಲ್ಲಿ ಪ್ರಶ್ನಿಸುತ್ತಾ ನಿಂತಿದ್ದಾಗ ಕಾರೊಂದು ಅತಿವೇಗದಲ್ಲಿ ಬಂದು ಯುವಕರಿಗೆ ಡಿಕ್ಕಿಯಾಗಿದೆ.

RELATED ARTICLES  ಮುಖ್ಯಮಂತ್ರಿಗಳು ಬರುವ ದಾರಿಯಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ

ಪರಿಣಾಮ ಕಾರವಾರ ತಾಲೂಕಿನ ಕೊಂಕಣವಾಡದ ಸೂರಜ ರಾಣೆ ಎನ್ನುವಾತ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬoಧಿಸಿದoತೆ ಆರೋಪಿಗಳು ಪರಾರಿಯಾಗಿದ್ದಾರೆ. ತಪ್ಪಿತಸ್ಥರನ್ನು ಬಂಧಿಸುವoತೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಮೃತನ ಸಂಬoಧಿ, ಸ್ನೇಹಿತರು ಜಮಾಯಿಸಿ ಕ್ರಮಕ್ಕೆ ಆಗ್ರಹಿಸಿದ ಘಟನೆ ನಡೆದಿದೆ.

RELATED ARTICLES  ಅನುಮಾನಾಸ್ಪದವಾಗಿ ಓಡಾಡಿದ ಕಾರು : ಕಾರಿನ ಪಕ್ಕದಲ್ಲಿ ಚೂರಿ

ಇದೇ ವೇಳೆ ಗೋವಾ ಸಿಎಂಗೆ ಝೀರೋ ಟ್ರಾಫಿಕ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ವಿಐಪಿಗಳಿಗಾಗಿ ಹೆದ್ದಾರಿಯಲ್ಲಿ ಝೀರೋ ಟ್ರಾಫಿಕ್ ಮಾಡಿ ಕತ್ತಲಲ್ಲಿ ಏಕಾಏಕಿ ಒನ್ ವೇಯಲ್ಲಿ ಎದುರು ಬದುರು ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರಿಂದಲೇ ಈ ಅಫಘಾತ ಜರುಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.