ಬೆಂಗಳೂರು: ಎದೆನೋವು ಕಾಣಿಸಿಕೊಂಡು ಹಿರಿಯ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಇಂದು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ರಾಜಾಜಿ ನಗರದಲ್ಲಿ ಅವರ ಮನೆಯ ಸಮೀಪ ಅಪೋಲೊ ಆಸ್ಪತ್ರೆಗೆ ಹಂಸಲೇಖ ದಾಖಲಾಗಿದ್ದು, ವೈದ್ಯರು ಯಾವುದೇ ತೊಂದರೆ ಇಲ್ಲ. ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಹಂಸಲೇಖ ಅವರಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.

RELATED ARTICLES  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.2 ಲಕ್ಷ ದೇಣಿಗೆಯನ್ನು ನೀಡಿದ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್

ಈ ಹಿಂದೆ ಹಂಸಲೇಖ ಅವರು ಒಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು.ವೈದ್ಯರ ಸಲಹೆ ಮೇರೆಗೆ ಇಂದು ಆಸ್ಪತ್ರೆಯಲ್ಲಿ ಉಳಿದುಕೊಂಡು ನಾಳೆ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವ ನಿರೀಕ್ಷೆಯಿದೆ. 

RELATED ARTICLES  ಜನವರಿ 14 ರಿಂದ ಮಾರ್ಚ್​ 3 ರವರೆಗೆ ಅರ್ಧ ಕುಂಭಮೇಳ : ಈ ಬಾರಿಯ ಕುಂಭ ಮೇಳ ಹೊಸದೊಂದು ಇತಿಹಾಸಕ್ಕೆ ಸಾಕ್ಷಿ.