ಕುಮಟಾ : ಕುದಿಯುತ್ತಿರುವ ಎಣ್ಣೆಯಿಂದ ಖಾಲಿ ಕೈನಲ್ಲಿ ಭಕ್ತರು ವಡೆ ತೆಗೆದು ಭಕ್ತಿ ಪರಾಕಾಷ್ಠೆ ಮೆರೆದರು. ಹೌದು, ಭೂಮಿ ಹುಣ್ಣಿಮೆಯ ದಿನ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ವಿಶಿಷ್ಟವಾಗಿ ವಡೆ ಸೇವೆ ನೆರವೇರಿತು. ಬಿಸಿ ಎಣ್ಣೆ ಅನ್ನೋದನ್ನ ಲೆಕ್ಕಿಸಿದೇ ಕಾದಿರುವ ಎಣ್ಣೆಯಲ್ಲಿ ಬೇಯುತ್ತಿರುವ ವಡೆಗಳನ್ನು ಬರಿಗೈನಲ್ಲಿ ಭಕ್ತರು ತೆಗೆಯುವ ಸಂಪ್ರದಾಯ ನಡೆಸಿಕೊಂಡು ಬರುವ ಮೂಲಕ ಅಚ್ಚರಿ ಮೂಡಿಸಿದೆ.

ಪ್ರತೀ ವರ್ಷ ಅಶ್ವಿನಿ ಮಾಸದ ಹುಣ್ಣಿಮೆ ದಿನದಂದು ನಡೆಯುವ ಉತ್ಸವದಲ್ಲಿ ಈ ಸಂಪ್ರದಾಯ ನಡೆಸಿಕೊಂಡು ಬರಲಾಗುತ್ತಿದ್ದು, ಇಲ್ಲಿ ನಡೆಯುವ ಚಮತ್ಕಾರವನ್ನು ನೋಡಿ ಭಕ್ತರು ಆ ಶಕ್ತಿಗೆ ಶರಣು ಶರಣೆನ್ನುತ್ತಾರೆ. ಮೂಲತಃ ಗುವಾಹಟಿಯ ಕಾಮಾಕ್ಷಿ ದೇವರು ಕುಮಟಾಕ್ಕೆ ಬಂದು ನೆಲೆಸಿದ ನಂತರ ಪ್ರತಿ ವರ್ಷ ದೇವಸ್ಥಾನದಲ್ಲಿ 15 ದಿನಗಳ ಕಾಲ ಉತ್ಸವ ನಡೆಸಲಾಗುತ್ತಿದೆ. ಹದಿನೈದನೇ ದಿನ ಭೂಮಿ ಹುಣ್ಣಿಮೆಯಂದು ಈ ಉತ್ಸವ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಈ ವಡೆ ಸೇವೆ ಹಮ್ಮಿಕೊಳ್ಳಲಾಗುತ್ತದೆ.

RELATED ARTICLES  Viral Video: ಮಳೆಯಲ್ಲಿ ನೆನೆಯುತ್ತಾ ರೊಮ್ಯಾಂಟಿಕ್ ಹಾಡಿಗೆ ಯುವ ಜೋಡಿಯ ಡ್ಯಾನ್ಸ್‌!

ಇದನ್ನೂ ಓದಿ – ಮಾತನಾಡುತ್ತ ನಿಂತವನಿಗೆ ಬಡಿದ ವಾಹನ : ಯುವಕ ಸಾವು.

ತಮ್ಮ ಒಳಿತಿಗಾಗಿ ಹರಕೆ ಕಟ್ಟಿಕೊಳ್ಳುವ ಭಕ್ತರು ಕಾದ ಬಾಣಲಿಯಲ್ಲಿ ವಡೆ ತೆಗೆಯುವ ಮೂಲಕ ಹರಕೆ ತೀರಿಸುತ್ತಾರೆ. ಇದು ನೋಡುಗರ ಮೈ ರೋಮಾಂಚನಗೊಳಿಸುತ್ತದೆ. ದೇವಸ್ಥಾನದಲ್ಲಿ ಹದಿನೈದು ದಿನಗಳ ಕಾಲ ನವರಾತ್ರಿ ಉತ್ಸವ ಆಚರಿಸಿದ ಬಳಿಕ ಹುಣ್ಣಿಮೆಯಂದು ಈ ಉತ್ಸವ ಮುಕ್ತಾಯವಾಗುವ ಹಿನ್ನೆಲೆ ಜಾತ್ರೆ ಮಾಡಲಾಗುತ್ತದೆ. ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ಭಕ್ತರು ತೆಗೆಯೋದು ಈ ಕಾಮಾಕ್ಷಿ ದೇವಿಯ ಜಾತ್ರೆಯ ವಿಶೇಷ.

ಮೂಲತಃ ಗುವಾಹಟಿಯ ಕಾಮಾಕ್ಷಿ ದೇವರು ಕುಮಟಾಕ್ಕೆ ಬಂದು ನೆಲೆಸಿದ ನಂತರ ಕಳೆದ ಹಲವಾರು ವರ್ಷಗಳಿಂದ ಅಶ್ವಿನಿ ಮಾಸದ ಹುಣ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ಭಕ್ತರು ತೆಗೆಯೋದು ಈ ಕಾಮಾಕ್ಷಿ ದೇವಿಯ ಜಾತ್ರೆಯ ವಿಶೇಷ.

RELATED ARTICLES  ಬೈಕ್ ಅಪಘಾತ: ಪರಮೇಶ್ವರ ಹೆಗಡೆ ಸಾವು