ಹೊನ್ನಾವರ: ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಅವನ ತಂದೆ ಕಮಲಾಕರ ಮೇಸ್ತ ಅವರ ಆಸೆಯಂತೆ ಪುನರ್ ತನಿಖೆಗೆ ಆದೇಶ ಕೊಡುವಂತೆ ಗೃಹಮಂತ್ರಿಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಮಾಡಿ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹೊನ್ನಾವರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರದಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗೃಹ ಮಂತ್ರಿಗಳ ಜೊತೆಗೆ ಈಗಾಗಲೇ ಮಾತನಾಡಿದ್ದೇನೆ. ಸಿಬಿಐ ಬಿ ರಿಪೋರ್ಟ್ ಹಾಕಿದ ವರದಿಯನ್ನು ತರಿಸಿಕೊಂಡು ಗೃಹಮಂತ್ರಿಗಳು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆ ಚರ್ಚೆಮಾಡಿ ಪುನರ್ ತನಿಖೆಗೆ ಮನವಿ ಮಾಡುವುದಾಗಿ ತಿಳಿಸಿದರು.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ಸಿ.ವಿ.ಎಸ್‍.ಕೆ ಅತ್ಯುತ್ತಮ ಸಾಧನೆ


ಪರೇಶ ಮೇಸ್ತನ ತಂದೆ ಹೇಳುವ ಪ್ರಕಾರ ತನ್ನ ಮಗನ ಸಾವು ಅಸಹಜವಾಗಿದೆ. ಸಾಕ್ಷ್ಯಾಧಾರಗಳು ಸಿಕ್ಕಿಲ್ಲವೆಂದಾಗ ಸಾವು ಸಹಜವಾಗುವುದಿಲ್ಲ. ಅದು ಹೇಗೆ ನಡೆದಿದೆ ಎಂಬ ಸಂಚನ್ನು ಬೇಧಿಸಲಿಕ್ಕೆ, ಈಗಿರುವ ಬಿರಿಪೋರ್ಟಿಗೆ ಬೇರೆಬೇರೆ ಕಾರಣಗಳಿರಬಹುದು. ಮರುತನಿಖೆ ಮಾಡಬೇಕು ಎಂಬ ಭಾವನೆಗೆ ಅರ್ಥ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ದಿನಕರ ಶೆಟ್ಟಿ, ಶಾಸಕ ಸುನೀಲ ನಾಯ್ಕ, ಎಂ.ಎಲ್.ಸಿ. ಗಣಪತಿ ಉಳ್ವೇಕರ, ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಹೊನ್ನಾವರ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಶಿರಸಿಯಲ್ಲಿ ತಾರಕಕ್ಕೆ ಏರಿದ ಹಿಜಾಬ್ ವಿವಾದ : ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಜಾರಿ..!