ಶಿರಸಿ: ಮಹಿಳೆಯೋರ್ವಳು ಅಕ್ಟೋಬರ್ 7ರಂದು ಮನೆಯಲ್ಲಿ ಯಾರಿಗೂ ಹೇಳದೆ ಹೊರಗೆ ಹೋದವಳು ಇದುವರೆಗೂ ಮನೆಗೆ ಹಿಂತಿರುಗಿ ಬಾರದೇ ಹಾಗೂ ಎಲ್ಲಿಯೂ ಪತ್ತೆಯಾಗದೇ ಇರುವ ಬಗ್ಗೆ ಕುಟುಂಬವರ್ಗದಿಂದ ಮಾರುಕಟ್ಟೆ ಠಾಣೆಯಲ್ಲಿ ಮಹಿಳೆ ನಾಪತ್ತೆ ಕುರಿತು ಪ್ರಕರಣವೊಂದು ದಾಖಲಾಗಿದೆ.

ಸರಿತಾ ಸುರೇಶ ಶಂಕರಪ್ಪಣ್ಣನವರ ವಡ್ಡರ ಓಣಿ ಕಸ್ತೂರಬಾ ನಗರ ಎಂಬುವಳೇ ನಾಪತ್ತೆಯಾದ ಮಹಿಳೆಯಾಗಿದ್ದಾಳೆ. ಸುಮಾರು 5.2 ಅಡಿ ಎತ್ತರವಿರುವ ಈಕೆ ಸಾಧಾರಣ ಮೈಕಟ್ಟು, ದುಂಡು ಮುಖ ಹಾಗೂ ಗೋದಿ ಮೈಬಣ್ಣವನ್ನು ಹೊಂದಿದ್ದಾರೆ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು?

ಇದನ್ನೂ ಓದಿ – 108 ತುರ್ತು ಸೇವೆಯಲ್ಲಿ ಸಮಸ್ಯೆ..? ಆರೋಗ್ಯ ಸಚಿವರು ಹೇಳಿದ್ದೇನು?

ಕನ್ನಡದಲ್ಲಿ ಮಾತನಾಡುವ ಈಕೆ ನಾಪತ್ತೆಯಾಗುವ ವೇಳೆಯಲ್ಲಿ ಸೀರೆಯನ್ನು ಧರಿಸಿದ್ದು, ಈ ಚಹರೆಯುಳ್ಳ
ಮಹಿಳೆಯ ಬಗ್ಗೆ ಮಾಹಿತಿ ಅಥವಾ ಗುರುತು ಸಿಕ್ಕಲ್ಲಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 9480805255ಕ್ಕೆ ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿಕೊಂಡಿದ್ದಾರೆ.

RELATED ARTICLES  ಅಸಮರ್ಪಕವಾದ ರಸ್ತೆ ಶವವನ್ನು ಮೂರು ಕಿ.ಮೀ.ವರೆಗೆ ಜೋಲಿಯಂತೆ ಕಟ್ಟಿಕೊಂಡು ಹೊತ್ತೊಯ್ದ ಜನರು.