ಸಿದ್ದಾಪುರ :- ಬಹುತೇಕ ಹಾವುಗಳು ಮೊಟ್ಟೆ ಹಾಗೂ ಮರಿ ಹಾಕುವ ಸಂದರ್ಭ ಯಾರಿಗೂ ಕಾಣಿಸದಂತೆ ಕಲ್ಲುಬಂಡೆ ಪೊದೆಗಳಲ್ಲಿ ಅಡಗಿ ಸಂತಾನೋತ್ಪತ್ತಿ ಮಾಡುತ್ತವೆ. ಅಪರೂಪದ ಹೊಟ್ಟೆ ನೀರೊಳ್ಳೆ ಎಂಬ ಆ 19. ಮೊಟ್ಟೆಗಳನ್ನಿಡುವ ದೃಶ್ಯವನ್ನ ಸಿದ್ದಾಪುರ ಗುಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ತ ಮ್ಮ ಮೊಬೈಲ್ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .

RELATED ARTICLES  ಕುಮಟಾದಲ್ಲಿ ಅಪಘಾತ : ಗ್ರಾ.ಪಂ ಅಧ್ಯಕ್ಷೆಗೆ ಗಂಭೀರ ಗಾಯ.

ಹೊಸನಗರ ತಾಲ್ಲೂಕಿನ ಗುಡ್ಡೆಹೊಸೂರು ಸಮೀಪದ ಫಿಶ್ ಫಾರ್ಮ್ ಬಳಿ ಹಾವು ಇರೋ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಸಂದರ್ಭ ಕಲ್ಲು ಗುಂಡಿಯೊಳಗೆ ಮೊಟ್ಟೆ ಇಡಲು ಪ್ರಾರಂಭಿಸಿದ ಹಾವನ್ನ ಕಂಡು ಅಚ್ಚರಿಪಟ್ಟಿದ್ದಾರೆ .
ಕೆಲ ಗಂಟೆ ಕಾಲ ಸ್ಥಳದಲ್ಲೇ ಇದ್ದು ಗಮನಿಸಿದ ಸಂದರ್ಭ 9ಮೊಟ್ಟೆಗಳನ್ನ ಹಾಕಿದ ಹಾವು ಹಾಗೂ ಮೊಟ್ಟೆಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಮನೆಯಲ್ಲಿ ಕಾವುಗಿಟ್ಟಿದ್ದಾರೆ.

RELATED ARTICLES  ಹೊಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಇದನ್ನೂ ಓದಿ – ಅಯ್ಯಯ್ಯೋ ನಡೆದೋಯ್ತು ಭೀಕರ ಅಪಘಾತ : ಕಂಡ ಜನ ಕಂಗಾಲು

ನಲವತ್ತು ದಿನಗಳ ಒಳಗೆ ಮೊಟ್ಟೆಯಿಂದ ಹಾವು ಮರಿ ಹೊರ ಬರಲಿದ್ದು ನಂತರ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗುವುದು ಎಂದು ಸುರೇಶ್ ತಿಳಿಸಿದ್ದಾರೆ .

Source : Andolana News