ಕುಮಟಾ : ಕರ್ನಾಟಕ ರಾಜ್ಯ ಬೋಧಕರ ಸಂಘದ ವಾಲ್ಮೀಕಿ ಜಯಂತಿಯಲ್ಲಿ ಡಿ. ಡಿ. ಪಿ. ಐ. ಈಶ್ವರ ನಾಯ್ಕ್ ಅಭಿಮತ.
ಕುಮಟಾ :-ರಾಮಾಯಣವನ್ನು ಆದರ್ಶವೆಂದು ಕೇವಲ ಭಾರತೀಯರಷ್ಟೇ ಅಲ್ಲದೇ ಜಗತ್ತಿನ ಇತರ ರಾಷ್ಟ್ರಗಳು ಆರಾಧಿಸುವಲ್ಲಿ ರಾಮನಂತಹ ಅನನ್ಯ ವ್ಯಕ್ತಿತ್ವವನ್ನು ನೀಡಿದ ವಾಲ್ಮೀಕಿ ಮಹರ್ಷಿಗಳು ಪ್ರಾತಃ ಸ್ಮರಣಿಯರೆಂದು ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಪನಿರ್ದೇಶಕ ಈಶ್ವರ ನಾಯ್ಕ್ ನುಡಿದರು. ಅವರು ಶಹರದ ಬಗ್ಗೋಣದ ಮಡಿವಾಳಕೇರಿಯಲ್ಲಿನ ಎಸ್. ಎಸ್ ಪೈ ರವರ ನಿವಾಸವಾದ ‘ಶ್ರೀ ಮೂಕಾಂಬಿಕಾ ‘ದಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘವು ಆಯೋಜಿಸಿದ ‘ವಾಲ್ಮೀಕಿ ಜಯಂತಿ ‘ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

RELATED ARTICLES  ಮಾತೃಭಾಷೆ ಶಿಕ್ಷಣ ಸೃಜನಶೀಲತೆ ಹೆಚ್ಚಿಸಬಲ್ಲದು - ಡಾ.ಎನ್.ಆರ್.ನಾಯಕ

ಜಗತ್ತಿನಲ್ಲಿ ಶ್ರೀ ರಾಮನಂತಹ ಶ್ರೇಷ್ಠ ವ್ಯಕ್ತಿತ್ವವನ್ನು ಯಾವುದೇ ಕಾವ್ಯ -ನಾಟಕಗಳಲ್ಲಿ ಕಾಣಲಾರೆವು. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನು ತನ್ನ ನಡೆ -ನುಡಿಯಲ್ಲಿನ ಏಕರೂಪತೆಯಿಂದ ಸಾರಿದ ಜೀವನ ಸಂದೇಶಮೌಲಿಕವಾದುದು, ರಾಮನ ಉದಾತ್ತವಾದ ಚಿಂತವನ್ನು ಆದರ್ಶವೆಂದು ಒಪ್ಪಿ -ಅಪ್ಪಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಅವರು ಹೇಳಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಗಾಂವ್ಕರ್ ಬರ್ಗಿ ಮಾತನಾಡಿ ರಾಮಾಯಣವು ವಿಶ್ವವಂದ್ಯವಾದ ಮಹಾಕಾವ್ಯವಾಗಿದ್ದು, ಅದರಲ್ಲಿನ ಪಾತ್ರಗಳನ್ನು ಸೃಜನಶೀಲವಾಗಿ ಸ್ರಷ್ಟಿಸುವಲ್ಲಿ ವಾಲ್ಮೀಕಿಯಲ್ಲಿನ ಸಹಜ ಸಿದ್ಧವಾದ ಪ್ರೌಢ ಪ್ರತಿಭೆಯು ಸಶಕ್ತವಾಗಿ ಅಭಿವ್ಯಕ್ತಿ ಗೊಂಡಿರುವುದನ್ನು ಅಧ್ಯಯನದಿಂದ ಮನಗಾ ಣಬಹುದಲ್ಲದೆ, ರಾಮಾಯಣವು ಅನೌಪ ಚಾರಿಕವಾಗಿ ಬದುಕಿಗೆ ನಿತ್ಯ ನೂತನವಾದ ಪಾಠಮಾಡುತ್ತಿದೆ ಎಂದರು.

RELATED ARTICLES  ಬಾಲಕಿಯ ಸಮಯ ಪ್ರಜ್ಞೆ : ತಪ್ಪಿದ ಭಾರೀ ಅನಾಹುತ.

ಸಂಘದ ರಾಜ್ಯ ಸಂಚಾಲಕರಾದ ವಿಜಯ ಕುಮಾರ ನಾಯ್ಕ್ ಸ್ವಾಗತಿಸಿ -ವಂದಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಪೈ, ಕೋಶಾಧ್ಯಕ್ಷ ಶಿವಚಂದ್ರ ಹಾಗೂ ಸಮನ್ವಯ ಕಾರರಾದ ಬಾಲಚಂದ್ರ ಗಾoವಕರ್ ಮೊದಲಾದವರು ಇದ್ದರು.