ಅಂಕೋಲಾ : ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರದ ವಿದ್ಯುತ್ ಸರಬರಾಜು ಮಂಡಳಿಯ ಸಿಬ್ಬಂದಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿ ಮಂಜುನಾಥ ಬಸವರಾಜ ಕೋಳುರು ಮತ್ತು ಅವರ ಪತ್ನಿ ಅಶ್ವಿನಿ ಮಂಜುನಾಥ ಕೋಳುರು ಅವರಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜು ಗುಜ್ಜಾಗಿ,ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ತೀವ್ರ ಸ್ವರೂಪದ ಗಾಯಗಳಾದ ಘಟನೆ ವರದಿಯಾಗಿದೆ.

ಅಪಘಾತವಾದ ತಕ್ಷಣ 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರರ ಸಹಕಾರದಲ್ಲಿ ತುರ್ತು ಕ್ರಮ ಕೈಗೊಂಡಿದ್ದರು. ಘಟನೆಯಲ್ಲಿ ದಂಪತಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಸಾಗಿಸಲಾಗಿದೆ.

RELATED ARTICLES  ಪ್ರಶಾಂತ ದೇಶಪಾಂಡೆ ಹುಟ್ಟುಹಬ್ಬ ಆಚರಣೆ.

ಇದನ್ನೂ ಓದಿ – ಪಣಜಿಯ ಸಮುದ್ರದಲ್ಲಿ ಪತನವಾಯ್ತು MIG 29K ಯುದ್ಧ ವಿಮಾನ

ಅಕ್ಟೋಬರ್ 8 ರಂದು ಅಂಕೋಲಾದಿಂದ ಕುಂದಾಪುರ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿ ಬಂದ ಲಾರಿ ಚಾಲಕ ರಸ್ತೆಯ ಬಲಬದಿಗೆ ಬಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ಅವರ ತಲೆ ಮತ್ತು ಬಲ ಕೈ ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರ ಪತ್ನಿ ಅಶ್ವಿನಿ ಅವರ ಬಲ ಭುಜಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ವರುಣ ಭಟ್ಟ ಕಡವೆ ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣ

ಇದನ್ನೂ ಓದಿ –