ಕುಮಟಾ : 25 ಅಡಿ ಆಳದ ತೆರೆದ ಬಾವಿಯಲ್ಲಿ ಆಯತಪ್ಪಿ ಬಿದ್ದಿದ್ದ ಯುವತಿಯನ್ನು ಕುಮಟಾ ಅಗ್ನಿಶಾಮಕ
ದಳ ಹಾಗೂ ಪೋಲಿಸರು ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ. ಕತಗಾಲ ಗ್ರಾಮದ ಸಾಂತೂರಿನಲ್ಲಿ ಯುವತಿಯೋರ್ವಳು ಬಾವಿಯಲ್ಲಿ ಬಿದ್ದಿದ್ದು ತಕ್ಷಣದಲ್ಲಿ ಆಕೆಯನ್ನು ಮೇಲೆತ್ತುವ ಬಗ್ಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ತುರ್ತು ಕಾರ್ಯಾಚರಣೆ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಮುಕ್ತಾ ನಾಯ್ಕ (23) ಎಂಬ ಯುವತಿಯೇ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ಪೊಲೀಸರು, ಅಗ್ನಿಶಾಮಕ ಠಾಣೆ ಕುಮಟಾ ಸಿಬ್ಬಂದಿಯವರು ಹಾಗು ಸಾರ್ವಜನಿಕರ ಸಹಕಾರದೊಂದಿಗೆ ಸುರಕ್ಷಿತವಾಗಿ ಬಾವಿಯಿಂದ ಮೇಲೆಕ್ಕೆತ್ತಿ ಸರಕಾರಿ ಆಸ್ಪತ್ರೆ ಕುಮಟಾಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಸಿಲೆಂಡರ್ ಸ್ಪೋಟ : 25 ಕ್ಕೂ ಅಧಿಕ ಮೊಬೈಲ್ ಸುಟ್ಟು ಕರಕಲು

ಯುವತಿಯ ಪ್ರಾಣ ರಕ್ಷಣೆ ಮಾಡಿದ ಹವಾಲ್ದಾರ್ ನಾರಾಯಣ ಗೌಡ

ಅಳಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಂತುರು ಗ್ರಾಮದಲ್ಲಿ ಆಕಸ್ಮಿಕವಾಗಿ ಯುವತಿಯೊಬ್ಬಳು ಬಾವಿಗೆ ಬಿದ್ದ ವಿಷಯ ತಿಳಿದಾಕ್ಷಣ, ಕತಗಾಲ ಪೊಲೀಸ್ ಉಪ ಠಾಣೆಯ ಹವಾಲ್ದಾರ್ ಶ್ರೀ ನಾರಾಯಣಗೌಡ ಅವರು ಕಾನ್ಸ್ಟೇಬಲ್ ಶ್ರೀ ಆಂಜನೇಯ ಅವರೊಟ್ಟಿಗೆ ಧಾವಿಸಿ 30 – 35 ಅಡಿ ಆಳ ಬಾವಿಯಾಗಿರುವುದರಿಂದ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಿದರು 13 ಕಿಲೋಮೀಟರ್ ದೂರವಿರುವ ಕುಮಟಾದಿಂದ ಅಗ್ನಿಶಾಮಕ ವಾಹನ ಬರುವವರೆಗೆ ಪರಿಸ್ಥಿತಿ ಕೈಮೀರುತ್ತದೆ. ಎಂದು ತಿಳಿದು ತಮ್ಮ ಜೀವದ ಹಂಗನ್ನು ತೊರೆದು ತಾವೇ ಸ್ವತಃ ಬಾವಿಗೆ ಇಳಿದು ಪ್ರಾಣಾಪಾಯದಲ್ಲಿರುವ ಯುವತಿಯನ್ನು ತಮ್ಮ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಾಯದಿಂದ ಮೇಲೆತ್ತುವಲ್ಲಿ ಯಶಸ್ವಿಯಾದರು.

RELATED ARTICLES  ಬ್ರಿಜ್ ನಿಂದ ಕೆಳಕ್ಕೆ ಬಿದ್ದ ಲಾರಿ : ಕ್ಲೀನರ್ ಗಂಭೀರ
FB IMG 1665641047171

ತಕ್ಷಣ ಅಂಬುಲೆನ್ಸ್ ಮೂಲಕ ಕತಗಾಲ ಪ್ರಾಥಮಿಕ ಆರೋಗ್ಯಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿ ತಾಲೂಕ ಆರೋಗ್ಯ ಕೇಂದ್ರ ಕುಮಟಾಕ್ಕೆ ಕಳುಹಿಸಲಾಯಿತು. ಕಳೆದ ಸುಮಾರು 15 ತಿಂಗಳುಗಳಿಂದ ಉಪಕೇಂದ್ರದಲ್ಲಿ ಹವಾಲ್ದರರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶ್ರೀ ನಾರಾಯಣಗೌಡ ಅವರು ನೆರೆಹಾವಳಿ ಪರಿಹಾರ ಕಾರ್ಯಗಳಲ್ಲಿಯೂ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವುದಲ್ಲದೆ ಲಾಕ್ಡೌನ್ ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.

RELATED ARTICLES  ಆನ್ ಲೈನ್ ಆಪ್ ಮೂಲಕ ಕೆಲಸ ಕೊಡಿಸೋದಾಗ ವಂಚನೆ.

ಇವರ ಈ ಸಾಹಸ ಮತ್ತು ಸಮಯಪ್ರಜ್ಞೆಗೆ ಇಲಾಖೆ ನೀಡುವ ಪದಕ ಪ್ರಶಸ್ತಿ ಸನ್ಮಾನಗಳು ಸಿಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ಈ ರಕ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ನಾರಾಯಣ್ ಗೌಡ, ಆಂಜನೇಯ, ಅಗ್ನಿಶಾಮಕ ಠಾಣೆ ಕುಮಟಾ ಸಿಬ್ಬಂದಿಯವರಾದ ಠಾಣಾಧಿಕಾರಿ ಟಿ.ಏನ್. ಗೊಂಡ, ಸಿಬ್ಬಂದಿ ಕುಮಾರ ಗೌಡ, ರಾಜೇಶ್ ನಾಯಕ, ದಿನೇಶ ಕುಮಾರ, ರಾಜೇಶ ಮಡಿವಾಳ, ಅಜಯ್ ನಾಯ್ಕ, ನಾಗರಾಜ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಜು ಪೈ ಹಾಗೂ ಇತರರು ಹಾಜರಿದ್ದರು.

ಉತ್ತರಕನ್ನಡದ ಎಲ್ಲಾ ಸುದ್ದಿಗಳನ್ನೂ ಆರಾಮಾಗಿ ಹಾಗೂ ಉಚಿತವಾಗಿ ಓದಬೇಕೇ? ಹಾಗಾದರೆ ಈ ಲಿಂಕ್ ಒತ್ತಿ. https://satwadhara.news/category/local-news-uttara-kannada/