ಕಾರವಾರ : ಭಟ್ಕಳ ಪಟ್ಟಣದ ಕೋಟೇಶ್ವರ ರಸ್ತೆಯ ಎನ್ನುವ ಕಳ್ಳನದ ಆರೋಪಿಯೋರ್ವನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ 25 ಸೈಕಲ್ 3 ಬೈಕ್ ಜಪ್ತಿ ಮಾಡಿದ ಘಟನೆ ನಡೆದಿದೆ. ಆರೋಪಿಯ ಮೇಲೆ ದಾಳಿ ನಡೆಸಿದ್ದು, ಈತನನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ ಪೊಲೀಸರಿಗೆ ಬಟ್ಟೆ ಬದಲಿಸಿ ಬರುವುದಾಗಿ ಹೇಳಿದ್ದು, ಇದನ್ನು ನಂಬಿದ ಪೊಲೀಸರು ಆತನಿಗೆ ಬಟ್ಟೆ ಬದಲಿಸಲು ಅವಕಾಶ ಮಾಡಿಕೊಟ್ಟಿದ್ದು ,ಈವೇಳೆ ಪೊಲೀಸರಿಗೆ ಯಾಮಾರಿಸಿ ಮನೆಯಿಂದ ಆತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

RELATED ARTICLES  ಮನುಷ್ಯನಿಗೆ ಮೊಟ್ಟೆ ಇಡಲು ಸಾಧ್ಯವಿಲ್ಲ ? ಆದರೆ ಇಲ್ಲೊಬ್ಬ ಬಾಲಕ ಮೊಟ್ಟೆ ಇಡುತ್ತಿದ್ದಾನೆ !

ಭಟ್ಕಳ ಪಟ್ಟಣದಲ್ಲಿ ಕೆಲ‌ ದಿನಗಳಿಂದ ಸೈಕಲ್ , ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಭಟ್ಕಳ ಪೊಲೀಸರು ಆತ ಕದ್ದ ಸೈಕಲ್ ,ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES  ದಿನಕರ ಶೆಟ್ಟಿ ಜನಪ್ರಿಯತೆ ಸಹಿಸದವರಿಂದ ಅಪಪ್ರಾಚಾರದ ಹುನ್ನಾರ : ಯೋಗೇಶ್ ಪಟಗಾರ.

ಇದನ್ನೂ ಓದಿ – ಕುಮಟಾ ಶಿರಸಿ ರಸ್ತೆ ತಡೆದ ಪ್ರತಿಭಟನಾಕಾರರು : ಎಚ್ಚರಿಕೆಯ ಸಂದೇಶ

ಇನ್ನು ವಿಷಯ ತಿಳಿಯುತಿದ್ದಂತೆ ಸೈಕಲ್ ,ಬೈಕ್ ಕಳೆದುಕೊಂಡವರು ಸ್ಥಳಕ್ಕೆ ಆಗಮಿಸಿ ತಮ್ಮ ವಾಹನಗಳನ್ನು ಕೊಡುವಂತೆ ಪೊಲೀಸರಲ್ಲಿ ವಿನಂತಿ ಮಾಡಿದರು.

ಘಟನೆ ಸಂಬಂಧ ಭಟ್ಕಳ‌ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.