ಶಿರಸಿ : ತಾಲೂಕಿನ ದಾಸನಕೊಪ್ಪದ ಗಣೇಶ ವೈನ್ ಶಾಪ್ ನಲ್ಲಿ ಕಳೆದ ಅ.೨ ರಂದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬನವಾಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಭಟ್ಕಳದ ಅಬ್ದುಲ್ ಸಲಾಂ ಮಹಮ್ಮದ್ (39) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಅ.2 ರಂದು ದಾಸನಕೊಪ್ಪದ ಜಾಕೀರ್ ಹುಸೇನ್ ಅಲ್ಲಾಭಕ್ಷ ಎಂಬಾತರಿಗೆ ಸೇರಿದ ಗಣೇಶ ವೈನ್ ಶಾಪ್ ನಲ್ಲಿ 1,48,519/- ರೂ. ಮೌಲ್ಯದ ವಿವಿಧ ರೀತಿಯ ಮಧ್ಯಗಳನ್ನು ಕದ್ದು ಪರಾರಿಯಾಗಿದ್ದನು.ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES  ಹೆತ್ತ ತಾಯಿ ದೂರವಾಗಿ ಮನೆಯಲ್ಲಿಯೇ ಬೇರೆ ಕೋಣೆಯಲ್ಲಿ ವಾಸ್ತವ್ಯ : ಮನನೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಇದನ್ನೂ ಓದಿ – ಪೊಲೀಸ್ ದಾಳಿ : 25 ಸೈಕಲ್ 3 ಬೈಕ್ ಜಪ್ತಿ : ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಖತರ್ನಾಕ್ ಆಸಾಮಿ.

ಪ್ರಕರಣ ದಾಖಲಿಸಿಕೊಂಡ ಬನವಾಸಿ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಗೆ ಒಳಪಡಿಸಿದಾಗ ಜಾಫರ್ ಮಹ್ಮದ್ (38)ಹಾಗೂ ಶಂಶುದ್ದಿನ್ (42) ಎಂಬ ಇಬ್ಬರು ಈ ಕಳ್ಳತನದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದ್ದು, ಇವರಿಬ್ಬರ ಬಂಧನಕ್ಕೂ ಬನವಾಸಿ ಪೊಲೀಸರು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯ ವೇಳೆ ಕಳ್ಳತನಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತು ಮಾಡಲಾಗಿದೆ.

RELATED ARTICLES  ನವಜಾತ ಶಿಶುವಿನ ಪಾಲಕರು ಸಂಪರ್ಕಿಸಿ.

ಇದನ್ನೂ ಓದಿ – ಕಾರಿಗೆ ಡಿಕ್ಕಿ ಹೊಡೆದ ಲಾರಿ : ದಂಪತಿಗಳಿಗೆ ಗಂಭೀರ ಪೆಟ್ಟು.

ಈ ಕಾರ್ಯಾಚರಣೆ ಯು ಡಿವೈಎಸ್ಪಿ ರವಿ ನಾಯ್ಕ,ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನ ದಲ್ಲಿ ನಡೆದಿದ್ದು, ಬನವಾಸಿ ಠಾಣೆ ಪಿಎಸ್ಐ ಗಳಾದ ಹನುಮಂತ ಬಿರಾದಾರ, ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ನಡೆದಿದೆ.‌