ಕಾರವಾರ: ಯುವತಿಯೋರ್ವಳು ಸೇತುವೆ ಮೇಲಿಂದ ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ. ಯುವತಿಯನ್ನು ಕಾರವಾರದ ನಿವಾಸಿ ಅನುಪಮಾ ಎಂದು ಗುರುತಿಸಲಾಗಿದೆ. ಈ ಘಟನೆ ಇದೀಗ ಸಖತ್ ವೈರಲ್ ಆಗಿದ್ದಷ್ಟೇ ಅಲ್ಲದೇ, ಸುತ್ತಲ ಜನರಲ್ಲಿ ಭೀತಿ ಹುಟ್ಟಿಸಿದೆ ಎನ್ನಲಾಗಿದೆ.

ಸಂಜೆ ವೇಳೆ ನಗರದ ಕೋಡಿಭಾಗ್ ಸಮೀಪದ ಕಾಳಿ ಮೇಲ್ಸೇತುವೆ ಮೇಲೆ ಆಗಮಿಸಿದ್ದ ಯುವತಿ ನೋಡ ನೋಡುತ್ತಿದ್ದಂತೆ ಸೇತುವೆ ಮೇಲಿಂದ ನದಿಗೆ ಜಿಗಿದಿದ್ದಾಳೆ. ಈ ವೇಳೆ ಯುವತಿ ಹಾರುವುದನ್ನು ಗಮನಿಸಿದ ಕಾಳಿ ರಿವರ್ ಗಾರ್ಡನ್‌ನ ಲೈಫ್‌ಗಾರ್ಡ್ ಸಿಬ್ಬಂದಿ ಕೂಡಲೇ ಬೋಟ್ ಮೂಲಕ ತೆರಳಿ ನದಿಯಲ್ಲಿ ಮುಳುಗುವ ಹಂತದಲ್ಲಿದ್ದ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

RELATED ARTICLES  ಬಾಡದಲ್ಲಿ "ಯುಗಾದಿ ಉತ್ಸವ ಇದು ಮಾದರಿ ಉತ್ಸವ" ಕಾರ್ಯಕ್ರಮ ಸಂಪನ್ನ : ಸಾಧಕರನ್ನು ಅರಸಿಬಂದ ಸನ್ಮಾನ

ಇದನ್ನೂ ಓದಿ – ಸೈಕಲ್ ಹಾಗೂ ಬೈಕ್ ಕದಿಯುತ್ತಿದ್ದ ಖತರ್ನಾಕ್ ವ್ಯಕ್ತಿ : ಪೊಲೀಸ್ರಿಗೇ ಚಳ್ಳೆ ಹಣ್ಣು ತಿನಿಸಿದ.

ಸೇತುವೆ ಮೇಲಿಂದ ನದಿಗೆ ಹಾರಿದ ಪರಿಣಾಮ ಯುವತಿ ಅಸ್ವಸ್ಥಗೊಂಡಿದ್ದು ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಗೆ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಯುವತಿ ಆತ್ಮಹತ್ಯೆಗೆ ಯತ್ನಿಸಿದ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

RELATED ARTICLES  ಭಟ್ಕಳ ಮೂಲದ 22 ವರ್ಷದ ಯುವಕ ಕರೋನಾ ವೈರಸನಿಂದ ಗುಣಮುಖ : ನಾಳೆ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಆಸ್ಪತ್ರೆಗೆ ಕಾರವಾರ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವತಿ ಕುರಿತು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source : UKExpress