ಕುಮಟಾ : ಹೊಲನಗದ್ದೆಯ ಮೀನುಗಾರ ಸಮಾಜದ ಸಮುದಾಯ ಭವನ ಶಿಥಿಲಗೊಂಡಿದ್ದು ನೂತನ ಕಟ್ಟಡ ನಿರ್ಮಾಣ ಮಾಡಲು ಅನುದಾನ ಒದಗಿಸಿಕೊಡುವಂತೆ ಆ ಭಾಗದ ಮೀನುಗಾರ ಸಮಾಜದವರು ಮಾನ್ಯ ದಿನಕರ ಶೆಟ್ಟಿಯವರಿಗೆ ಇಂದು ಮನವಿ ಸಲ್ಲಿಸಿದರು. ಇವರ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು ಮುಖ್ಯಮಂತ್ರಿಗಳೊಡನೆ ಮಾತನಾಡಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

RELATED ARTICLES  ಹೊಲನಗದ್ದೆ ಶಾಲೆಯಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ.

ಮೀನುಗಾರ ಸಮಾಜದ ಅಧ್ಯಕ್ಷ ಶ್ರೀ ಬೀರಪ್ಪ ಈರಾ ಹರಿಕಂತ್ರ, ಪ್ರಮುಖರಾದ ಶ್ರೀ ನಾಗರಾಜ ಹಿಣಿ ಹಾಗೂ ಮೀನುಗಾರ ಸಮಾಜದ ಅನೇಕ ಹಿರಿಕಿರಿಯ ಸದಸ್ಯರು, ಹೊಲನಗದ್ದೆ ಗ್ರಾಮ ಪಂಚಾಯತ್ ಸದಸ್ಯರುಗಳು, ಹಾಗೂ ಆ ಭಾಗದ ಬಿಜೆಪಿ ಮುಖಂಡರು ಕಾರ್ಯಕರ್ತರು ಆಗಮಿಸಿದ್ದರು.

RELATED ARTICLES  ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ವಿವಿವಿ ಆನ್‍ಲೈನ್ ತರಬೇತಿ