ಕುಮಟಾ : ತಾಲೂಕಿನ ಗೋಕರ್ಣದ ತಾರಮಕ್ಕಿ ನಿವಾಸಿ ಹಾಗೂ ಗ್ರಾಮ ಪಂಚಾಯತದ ಅಧ್ಯಕ್ಷ ಮಂಜುನಾಥ ಜನ್ನು ಅವರಿಗೆ ಮಾತೃ ವಿಯೋಗ ಉಂಟಾಗಿದೆ. ರುಕ್ಮಾಬಾಯಿ ವಿಠಲ್ ಜನ್ನು (72) ಬುಧವಾರ ನಿಧನರಾದರು.
ರುಕ್ಮಾಬಾಯಿ ಅವರು ಪುತ್ರರಾದ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಜನ್ನು ಮತ್ತು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬಿ.ಜೆ.ಪಿ, ಹಿರಿಯ ಮುಖಂಡ ವಿನೋದ ಪ್ರಭು, ಮತ್ತಿತರ ಬಿ.ಜೆ.ಪಿ. ಕಾರ್ಯಕರ್ತರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.