ಕುಮಟಾ: ಪಟ್ಟಣದ ಮಹಾಸತಿ ಸಭಾಭವನದಲ್ಲಿ ಏಳು ದಿನಗಳು ನಡೆದ ತಾಳಮದ್ದಳೆ ಸಪ್ತಾಹಕ್ಕೆ ತೆರೆಬಿದ್ದಿದ್ದು, ಸಮಾರೋಪದಲ್ಲಿ ಪ್ರದರ್ಶನಗೊಂಡ ಭೀಷ್ಮಾರ್ಜುನ ಪ್ರಸಂಗ ಪ್ರೇಕ್ಷಕರನ್ನು ರಂಜಿಸಿತು. ಯಕ್ಷ ಕೌಮುದಿ ಟ್ರಸ್ಟ್ ಶ್ರೀರಂಗಪಟ್ಟಣ ಮತ್ತು ಯುಗಾದಿ ಸಮಿತಿ ಕುಮಟಾದ ಸಹಕಾರದಲ್ಲಿ ಕುಮಟಾ ಪಟ್ಟಣದ ಮಹಾಸತಿ ಸಭಾಭವನದಲ್ಲಿ ಸಂಘಟಿಸಲಾದ ತಾಳಮದ್ದಳೆ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಮುರಳೀಧರ ಪ್ರಭು ಮಾತನಾಡಿ, ತಾಳಮದ್ದಳೆ ಸಪ್ತಾಹವನ್ನು ಯಶಸ್ವಿತಾಗಿ ನಡೆಸಿದ ಗ.ನಾ.ಭಟ್ ಮೈಸೂರು ಅವರ ಕಾರ್ಯವನ್ನು ಶ್ಲಾಘಿಸಿದರು. ಈ ತಾಳಮದ್ದಳೆ ಕಾರ್ಯಕ್ರಮಕ್ಕೆ ಜನರ ಸ್ಪಂದನೆ ದೊರೆಯದಿರುವುದು ಬೇಸರ ಮೂಡಿಸಿದರು. ಬಂದವರು ಈ ಕಾರ್ಯಕ್ರಮದಲ್ಲಿ ಅಭಿರುಚಿ ಹೊಂದಿದವರು ಎಂಬ ಆತ್ಮತೃಪ್ತಿ ಇದೆ ಎಂದರು.

ಈ ಸಂದರ್ಭದಲ್ಲಿ ಭಾಗ್ವತರಾದ ಗೋಪಾಲಕೃಷ್ಣ ಭಟ್ ಕಡತೋಕಾ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ, ಈ ತಾಳಮದ್ದಳೆಯಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರು ಬಹಳ ಪ್ರಭುದ್ಧರು. ಅವರ ತಾಳಮದ್ದಳೆ ಪ್ರದರ್ಶನ ನೋಡುವುದೆ ಕಣ್ಣಿಗೊಂದು ಹಬ್ಬ ಎಂದರು.

RELATED ARTICLES  ಅಖಿಲ ಭಾರತೀಯ ಕೊಂಕಣಿ ಪರಿಷತ್ತನ 84 ನೇ ಸಂಸ್ಥಾಪನಾ ದಿನ

ಇದನ್ನೂ ಓದಿ – ಹೊನ್ನಾವರದಲ್ಲಿ ಭೀಕರ ಸರಣಿ ಅಪಘಾತ : ಬಸ್ ಬ್ರೇಕ್ ಫೇಲ್ ಆಗಿ ದುರ್ಘಟನೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ ಎಲ್ ಹೆಗಡೆ ಮಾತನಾಡಿ, ಯಕ್ಷಗಾನ, ತಾಳಮದ್ದಳೆಯಲ್ಲಿ ಅತ್ಯಂತ ಪ್ರಭುದ್ಧ ಕಲಾವಿದರು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಮುಂದಿನ ತಲೆಮಾರಿನಲ್ಲಿ ಅಂಥ ಕಲಾವಿದರನ್ನು ತಯಾರುಮಾಡುವ ಸವಾಲು ಎದುರಾಗಿದ್ದಾರೆ. ಅಂಥ ಉತ್ಸಾಹಿಗಳು ಯಾರಿದ್ದಾರೆ. ಹಾಗಾಗಿ ಈ ಕ್ಷೇತ್ರಕ್ಕಾಗಿ ಎರಡೆರಡು ಮಕ್ಕಳನ್ನು ನೀಡಿ ಎಂದು ಅನೇಕರಲ್ಲಿ ಕೇಳಿದ್ದೇನೆ. ಅಂಥ ಮೇರು ಕಲಾವಿದರನ್ನು ನಾವು ಸಿದ್ಧಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

RELATED ARTICLES  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಶ್ರೀಧರ ಶೇಟ್ ಶಿರಾಲಿ

ವೇದಿಕೆಯಲ್ಲಿ ನಿವೃತ್ತ ಇಂಜಿನೀಯರ್ ಆರ್.ಜಿ.ಭಟ್ ಇದ್ದರು. ಯಕ್ಷ ಕೌಮುದಿ ಟ್ರಸ್ಟ್ ಅಧ್ಯಕ್ಷ ಗ.ನಾ. ಭಟ್ ಮೈಸೂರು ಅವರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಮಾರೋಪ ಸಮಾರಂಭದ ಬಳಿಕ ಪ್ರದರ್ಶನಗೊಂಡ ಭೀಷ್ಮಾರ್ಜುನ ಪ್ರಸಂಗ ಪ್ರೇಕ್ಷಕರನ್ನು ರಂಜಿಸಿತು. ಹಲಸಿನಹಳ್ಳಿ ನರಸಿಂಹಶಾಸ್ತಿç ವಿರಚಿತ ಭೀಷ್ಮಾರ್ಜುನ ಪ್ರಸಂಗದಲ್ಲಿ ಹಿಮ್ಮೆಳದಲ್ಲಿ ಗೋಪಾಲಕೃಷ್ಣ ಭಟ್ಟ ಜೋಗಿಮನೆ ಮತ್ತು ಪಿ ಕೆ ಹೆಗಡೆ ಹರಿಕೇರಿ ಭಾಗ್ವತಿಕೆ ನಿರ್ವಹಿಸಿದರು. ಅರ್ಥಧಾರಿಗಳಾಗಿ ಡಾ. ಜಿ ಎಲ್ ಹೆಗಡೆ, ಕುಮಟಾ ಮತ್ತು ಜಿ ವಿ ಹೆಗಡೆ ಮೂರೂರು ಅಭಿನಯಿಸಿದರು. ಪ್ರೇಕ್ಷಕರ ಚಪ್ಪಾಳೆ ಕಲಾವಿದರನ್ನು ಹುರಿದುಂಬಿಸಿತು. ಭೀಷ್ಮಾರ್ಜುನ ಪ್ರಸಂಗ ಬಹಳ ಅದ್ಭುತವಾಗಿ ಮೂಡಿಬರುವ ಮೂಲಕ ತಾಳಮದ್ದಳೆ ಸಪ್ತಾಹ ಯಶಸ್ವಿಗೊಂಡಿತು.