ಅಂಕೋಲಾ: ಅಂಗಳದಲ್ಲಿ ನಡೆದುಕೊಂಡು ಹೋದನೆಂಬ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ಪಟ್ಟಣ ಕಸಬಾ ಕೇಣಿಯಲ್ಲಿ ನಡೆದಿದೆ. ಮಹೇಂದ್ರ ಎಂ. ಬಂಟ ಈತ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ವಿಜೇಂದ್ರ ಎಂಬುವವನೇ ಹಲ್ಲೆ ನಡೆಸಿದ ಆರೋಪಿ ಎನ್ನಲಾಗಿದೆ.
ಇದನ್ನೂ ಓದಿ – ಕಾಡಿನಲ್ಲಿದ್ದ ಗೇರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ
ಪಟ್ಟಣದ ಕಸಬಾ ಕೇಣಿಯಲ್ಲಿರುವ ವಿಜೇಂದ್ರ ಅವರ ಮನೆಯ ಅಂಗಳದಿಂದ ನಡೆದುಕೊಂಡು ಹೋಗುತ್ತಿದ್ದ ಮಹೇಂದ್ರ ಬಂಟ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ತುಳಸಿ ಕಟ್ಟೆಯಲ್ಲಿದ್ದ ದೇವರ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ.
ಹಲ್ಲೆಯ ತೀವ್ರತೆಗೆ ಮಹೇಂದ್ರ ಬಂಟ ಕುಸಿದು ಬಿದ್ದಿದ್ದಾನೆ. ಗಾಯಗೊಂಡಿರುವ ಮಹೇಂದ್ರ ಬಂಟನನ್ನು ಜಿಲ್ಲಾಸ್ಪತ್ರೆಯಲ್ಲಿ
ಚಿಕಿತ್ಸೆಗೊಳಪಡಿಸಲಾಗಿದೆ. ಈ ಕುರಿತು ಹಲ್ಲೆಗೊಳಗಾದವನ ಸಹೋದರಿ ಶ್ವೇತಾ ಜಿ. ಬಂಟ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ತನಿಖೆಯ ನಂತರ ಪೂರ್ಣ ವರದಿ ಹಾಗೂ ಸತ್ಯಾಸತ್ಯತೆ ತಿಳಿಯಬೇಕಿದೆ.
Source : Munjavu Digital