ಅಂಕೋಲಾ: ಆದರ್ಶ ಮಾತೆ ನೇತ್ರಾವತಿ ಸದಾನಂದ ತೊರ್ಕೆ(87) ವಯೋ ಸಹಜವಾಗಿ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ತೊರ್ಕೆ ಗ್ರಾಮದವರಾದ ಇವರು ಹಾಲಿ ವಂದಿಗೆಯಲ್ಲಿ ವಾಸಿಸುತ್ತಿದ್ದರು. ಇವರ ಪತಿ ಎಸ್.ವಿ. ತೊರ್ಕೆ ಸರಕಾರದ ಉನ್ನತ ಹುದ್ದೆ ನಿರ್ವಹಿಸಿ ನಿವೃತ್ತರಾದರು.
ಸ್ವಲ್ಪವೂ ಅಹಂ ಇಲ್ಲದ ನಿಗರ್ವಿ ಮಹಿಳೆ ಇವರಾಗಿದ್ದರು. ಎಲ್ಲರೊಂದಿಗೆ ಒಂದಾಗಿ ತನ್ನ ಕುಟುಂಬದ ಸದಸ್ಯರನ್ನು ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುತ್ತಿದ್ದರು. ಎಲ್ಲರೂ ಶಿಕ್ಷಣ ಪೂರೈಸಬೇಕು. ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು ಎನ್ನುವುದು ಇವರ ಆಶಯವಾಗಿತ್ತು.
ಇದನ್ನೂ ಓದಿ – ತೆರೆದ ಬಾವಿಯಲ್ಲಿ ಬಿದ್ದ ಯುವತಿ : ರಕ್ಷಣೆ ಮಾಡಿದ ರೋಚಕ ಘಟನೆ
ಪತಿ ಉತ್ತಮ ಹುದ್ದೆಯಲ್ಲಿದ್ದರೂ ಸಹ ಸರಳವಾಗಿ ಬದುಕು ನಡೆಸಿದವರು. ಉತ್ತಮ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು, ಗುರು ಹಿರಿಯರನ್ನು ಗೌರವಿಸಬೇಕು ಎಂದು ಸಲಹೆ ನೀಡುತ್ತಿದ್ದರು. ಮೃತರು ಪತಿ, 2 ಗಂಡು ಮತ್ತು 2 ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು
ಬಳಗವನ್ನು ಅಗಲಿದ್ದಾರೆ.
ಹಿರಿಯರಾಗಿರುವ ಇವರ ಅಂತಿಮ ದರ್ಶನವನ್ನು ನೂರಾರು ಸಾರ್ವಜನಿಕರು, ಗ್ರಾಮಸ್ಥರು, ಕುಟುಂಬಸ್ಥರು ಪಡೆದು ಸಂತಾಪ ಸೂಚಿಸಿದ್ದಾರೆ.