ಕಾರವಾರ : ತಾಲೂಕಿನಲ್ಲಿ ಕೋಮು ಸಂಘರ್ಷ ಹುಟ್ಟಿಸಿ ಶಾಂತಿ ಕದಡಲು ಪ್ರಯತ್ನಿಸಿದ ಇಬ್ಬರನ್ನು
ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಮುರುಡೇಶ್ವರ ಠಾಣೆ ಪೂಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ನಡೆದಿದೆ. ಶಿರಾಲಿಯ ನವೀನ್ ಸೋಮಯ್ಯ ನಾಯ್ಕ ,ನವೀನ್ ವೆಂಕಟೇಶ ನಾಯ್ಕ ಬಂಧಿತರಾಗಿದ್ದು, ಇಬ್ಬರೂ ವೈಯಕ್ತಿಕ ಕಾರಣಕ್ಕೆ ಇದೇ ತಿಂಗಳು ಎಂಟನೇ ತಾರೀಕಿನಂದು ತೆರ್ನಮಕ್ಕಿ ಚರ್ಚ ಎದುರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ನವೀನ್ ಸೋಮಯ್ಯ ನಾಯ್ಕ ನಿಗೆ ನವೀನ್ ವೆಂಕಟೇಶ ನಾಯ್ಕ ಕೀ ಚೈನ್ ನಿಂದ ತಲೆಗೆ ಹಲ್ಲೆ ನಡೆಸಿದ್ದನು ಎನ್ನಲಾಗಿದೆ.
ಇದನ್ನೂ ಓದಿ – ಎಲ್ಲರನ್ನೂ ಮಮತೆಯಿಂದ ಕಾಣುತ್ತಾ ಸರಳ ಬದುಕು ಬದುಕಿದ ಹಿರಿಯ ತಾಯಿ ಇನ್ನಿಲ್ಲ.
ಆದರೇ ನವೀನ್ ಸೋಮಯ್ಯ ನಾಯ್ಕನು ತಾನು ಮಾವಿನಕಟ್ಟಾ ದಿಂದ ಮುರ್ಡೇಶ್ವರದ ಕುಂಬಾರಕೇರಿಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಚಿಟ್ಟಿಹಕ್ಕಲು ಕ್ರಾಸ್ ಬಳಿ ಇರುವಾಗ ಟಿವಿಎಸ್ ಜೂಪಿಟರ್ ಸ್ಕೂಟಿಯಲ್ಲಿ ಬಂದ ವ್ಯಕ್ತಿಗಳು ರಾಡ್ ಮತ್ತು ಚೈನ್ ನಿಂದ ತನಗೆ ಹಲ್ಲೆಮಾಡಿ ಹೋಗಿದ್ದು , ಅವರು ಹಿಂದಿ ಮಾತನಾಡುತಿದ್ದು ಬಿಳಿ ಪಂಚೆ ಉಟ್ಟಿದ್ದು ಅನ್ಯಕೋಮಿನವರು ಎಂದು ಮುರ್ಡೆಶ್ವರ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದನು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುರ್ಡೇಶ್ವರ ಪೊಲೀಸರು ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು, ಎಸ್ಪಿ ಡಾ. ಸುಮನ್ ಡಿ ಪೆನ್ನೆಕರ್ ಮತ್ತು ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಸಿಪಿಐ ಮಹಾಬಲೇಶ್ವರ ನಾಯಕ ತಂಡ ಬೇದಿಸಿದ್ದು ದೂರು ನೀಡಿದ ನವೀನ್ ಭಟ್ಕಳದಲ್ಲಿ ಕೋಮು ಸಂಘರ್ಷ ಮೂಡಿಸಿ ಶಾಂತಿ ಕದಡಲು ಸುಳ್ಳು ದೂರು ನೀಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.