ಕುಮಟಾ : ತಾಲೂಕಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಇಲ್ಲಿನ ಮಣಕಿ ಸಮೀಪದ ಅಘನಾಶಿನಿ ನದಿಯಲ್ಲಿ ನಡೆದಿದೆ. ಶವವನ್ನು ಮೇಲಕ್ಕೆ ಎತ್ತಿ, ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮೃತ ವ್ಯಕ್ತಿಯ ಅಂದಾಜು ವಯಸ್ಸು 45 ರಿಂದ 50 ವರ್ಷ ಇರಬಹುದೆಂದು ಊಹಿಸಲಾಗಿದೆ.

RELATED ARTICLES  ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಕುಮಟಾ ವಿಭಾಗದಿಂದ ಕಾರ್ಯಕ್ರಮ

ಶವ ಕಂಡು ಜನರು ಕೆಲ ಕಾಲ ಗೊಂದಲಗೊಂಡರು ಎನ್ನಲಾಗಿದೆ. ಈತ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನದಿಯಲ್ಲಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

RELATED ARTICLES  ಹಳದಿಪುರ ರೈತ ಉತ್ಪಾದಕ ಕಂಪನಿಯಿಂದ ರೈತ ಮಹಿಳೆಯರಿಗೆ ಮಾಹಿತಿ ಕಾರ್ಯಕ್ರಮ.