ಅಂಕೋಲಾ : ಹಳ್ಳದ ನೀರಿನಲ್ಲಿ ಈಜಾಡಲು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ತಾಲೂಕಿನ ಕೃಷ್ಣಾಪುರದ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಈತ‌ ರವಿವಾರ ಮದ್ಯಾಹ್ನ ತನ್ನ ಕುಟುಂಬ ಸಂಬಂಧಿ ಓರ್ವನ ಜೊತೆ ಕೃಷ್ಣಾಪುರದ ಐ.ಆರ್ .ಬಿ ಪ್ಲಾಂಟ್ ಹಿಂದುಗಡೆ ಇರುವ ಹಳ್ಳದ ನೀರಿನಲ್ಲಿ ಈಜಾಡಲು ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

RELATED ARTICLES  ಕನ್ಯೆಯರು ವಿವಾಹವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದರೆ ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ!

ಇದನ್ನೂ ಓದಿ – ಅಪರಿಚಿತ ಶವ ಪತ್ತೆ : ಪೊಲೀಸರಿಂದ ಗುರುತು ಪತ್ತೆಗೆ ಕಾರ್ಯಾಚರಣೆ.

ಬೆಳಂಬಾರದ ತಾಳೆಬೈಲ್ ನಿವಾಸಿ ರಾಹುಲ್ ಗಿರಿಧರ ಗೌಡ (23) ಮೃತ ವ್ಯಕ್ತಿಯಾಗಿದ್ದು ಇಂಜಿನಿಯರಿಂಗ್ ಮುಗಿಸಿದ್ದ ಈತ ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈತ ಕೆಲ ದಿನದ ಹಿಂದೆ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದೆ.

RELATED ARTICLES  ಮಹಾಭಾರತದಲ್ಲಿ ಇಬ್ಬರು ಮಹಿಳೆಯರಿಗೆ ಹುಟ್ಟಿದ ಈ ರಾಜನ ಬಗ್ಗೆ ನಿಮಗೆ ಗೊತ್ತಾ..?

ಪಿ.ಎಸ್. ಐ ಮಹಾಂತೇಶ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.