ಅಂಕೋಲಾ : ತಾಲೂಕಿನ ಬೆಲೇಕೇರಿ ಹಟ್ಟಿಕೇರಿ ಕ್ರಾಸ್ ಬಳಿಯ ರಸ್ತೆಯಲ್ಲಿ ಬೈಕ್ ಸವಾರನೋರ್ವ ನಿಯಂತ್ರಣ ತಪ್ಪಿ ರಸ್ತೆಯಂಚಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಟ್ಟ ಘಟನೆ ರವಿವಾರ ಸಂಜೆ ಸಂಭವಿಸಿದೆ ಎಂದು ವರದಿಗಳು ತಿಳಿಸಿದೆ.

ಗೋವಾದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು ರಜೆಯ ಮೇಲೆ ಊರಿಗೆ ಬಂದಿದ್ದ, ಬೆಲೇಕೇರಿ ನಿವಾಸಿ ಸಾಹಿಲ್ ನಾಗೇಶ ನಾಯ್ಕ(22)ಮೃತ ದುರ್ದೈವಿ ಯುವಕನಾಗಿದ್ದು ಈತನ ಅಗಲುವಿಕೆಯಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

RELATED ARTICLES  ಮಾಜಿ ಪ್ರೇಯಸಿಗೆ 144 ಉತ್ತಮ ಸಂದೇಶ ಕಳಿಸುವಂತೆ ತೀರ್ಪು!

ಇದನ್ನೂ ಓದಿ – ಈಜಲು ತೆರಳಿದ ಸಂದರ್ಭದಲ್ಲಿ ನಡೆಯಿತು ಅವಘಡ : ಕೊನೆಯುಸಿರೆಳೆದ ಯುವಕ

ಈತ ಬೆಲೇಕೇರಿಯ ತನ್ನ ಮನೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ತಲೆ ಹಾಗೂ ಮುಖದ ಕೆಲ ಭಾಗಗಳಿಗೆ ಗಂಭೀರವಾಗಿ ಪೆಟ್ಟು ಬಿದ್ದ ಪರಿಣಾಮ ಆತ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.

RELATED ARTICLES  ಬಿಡುಗಡೆಯಾಗಲಿದೆ ಹೊಸ 100ರೂ ನೋಟು! ಅದರ ವಿನ್ಯಾಸ ಹೇಗಿರಲಿದೆ ಗೊತ್ತಾ?