ದಾಂಡೇಲಿ : ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದ ನೂರಾರು ಮೊಸಳೆಗಳು ಆಹಾರದ ಕೊರತೆಯಿಂದ ದಡದ ಮೇಲೆ ಬರುತ್ತಿವೆ. ಇದಲ್ಲದೇ ಗ್ರಾಮ ,ನಗರದ ಭಾಗಕ್ಕೂ ದಾಳಿ ಇಡುತಿದ್ದು ಮೊಸಳೆಗಳ ಕಾಟ ಹೆಚ್ಚಾಗಿವೆ. ಮೊಸಳೆಗಳನ್ನು ಕಂಡ ಜನ ಕಂಗಾಲಾಗುತ್ತಾ ಕೂಗಿರುವ ಘಟನೆಗಳೂ ವರದಿಯಾಗಿದೆ ಎನ್ನಲಾಗಿದೆ.

ತಾಲೂಕಿನಲ್ಲಿ ಕಾಳಿ ನದಿ ತೀರ ಪ್ರದೇಶದ ಗ್ರಾಮಗಳಲ್ಲಿ ಮೊಸಳೆ ಕಾಟ ಮಿತಿಮೀರಿದ್ದು ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಮೊಸಳೆಗಳು ಹಾವಳಿ ಇಡುತ್ತಿದೆ. ದಾಂಡೇಲಿಯ ಹೊಸಕೊಣಪಾ ಗ್ರಾಮದಲ್ಲಿ ಮೊಸಳೆಗಳು ದಡದಿಂದ ಮೇಲೆ ಬರುತಿದ್ದು ಚಿಕ್ಕ ಮರಿಗಳು ಸಹ ಈ ಭಾಗದಲ್ಲಿ ರಸ್ತೆಭಾಗದಲ್ಲಿ ಕಾಣಸಿಗುತಿದ್ದು ಸ್ಥಳೀಯ ಜನರು ಇದನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುತಿದ್ದಾರೆ. ಆದರೇ ಹೆಚ್ಚಿನ ಮೊಸಳೆಗಳು ಈ ಭಾಗದಲ್ಲಿ ಕಂಡುಬರುತ್ತಿರುವುದರಿಂದ ಮೊಸಳೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED ARTICLES  ಕುಮಟಾ : ಅಳ್ವೇಕೋಡಿಯಲ್ಲಿ ಬೆಂಕಿ ಅವಘಡ : 6 ತಾಸು ಕಾರ್ಯಾಚರಣೆ ಮಾಡಿದರೂ ನಂದದ ಬೆಂಕಿ.

ಇದನ್ನೂ ಓದಿ – ದೀವಗಿ ಸಮೀಪ ತೇಲಿ ಬಂದ ಶವ : ಜನ ಕಂಗಾಲು

ಈ ವರ್ಷ ಮೊಸಳೆಯ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಸದ್ಯ ದಾಂಡೇಲಿ ನಗರದಲ್ಲಿ ಇರುವ ಕಾಳಿ ನದಿ ಭಾಗದ ಮೊಸಳೆ ಪಾರ್ಕ ಅನ್ನು ಪ್ರವಾಸಿಗಳಿಗೆ ನಿರ್ಬಂಧ ಹೇರಲಾಗಿದೆ. ಈ ಭಾಗದಲ್ಲಿ ತಂತಿ ಬೇಲಿ ಅಳವಡಿಸಿದ್ದರೂ ಸುತ್ತಮುತ್ತಲ ಭಾಗದ ಹಳ್ಳಿಗಳಲ್ಲಿ ಮೊಸಳೆಗಳು ಆಹಾರ ಅರಸಿ ಬರುತಿದ್ದು ಜನರಿಗೆ ಆತಂಕ ಸೃಷ್ಟಿ ಮಾಡಿದೆ.

RELATED ARTICLES  ಜನರಿಗಾಗಿ ದುಡಿದ ದಿನಕರ ಶೆಟ್ಟಿಯವರನ್ನು ಮತ್ತೊಮ್ಮೆ ಗೆಲ್ಲಿಸಿ : ಕ್ಯಾಪ್ಟನ್ ಗಣೇಶ ಕಾರ್ಣಿಕ