ಯಲ್ಲಾಪುರ : ಬೊಲೆರೋ ಹಾಗೂ ರಾಜಹಂಸ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ತಾಲೂಕಿನ ಚವತ್ತಿಯ ಹತ್ತಿರ ಸಂಭವಿಸಿದೆ ಎನ್ನಲಾಗಿದೆ. ಬಸ್ ನಲ್ಲಿ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾರಿಗೂ ಕೂಡ ಗಂಭೀರ ಗಾಯಗಳಾಗಲಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.

RELATED ARTICLES  ರಾಣಿ ಚೆನ್ನಭೈರಾದೇವಿಯವರ ಹೆಸರಿನ ಥೀಮ್ ಪಾರ್ಕ್ ಸ್ಥಾಪನೆಗೆ ಅಗತ್ಯ ಕ್ರಮಕ್ಕೆ ಮುಂದಾಗಲು ಆಗ್ರಹ.

ರಾಜಹಂಸ ಬಸ್ಸು ಮೈಸೂರಿನಿಂದ ಯಲ್ಲಾಪುರಕ್ಕೆ ಸಿರಸಿ-ಯಲ್ಲಾಪುರ ಮಾರ್ಗದಿಂದ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ . ಬೊಲೇರೋ ಮತ್ತು ರಾಜಹಂಸ ಬಸ್ಸು ಎದುರಾಬದುರು ಡಿಕ್ಕಿಯಾಗಿದೆ ಎನ್ನಲಾಗಿದೆ. ಈ ಘಟನೆಯು ಇಂದು ಬೆಳಿಗ್ಗೆ 8.20 ರ ಸುಮಾರಿಗೆ ನಡೆದಿದ್ದು, ಘಟನೆಯಿಂದಾಗಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

RELATED ARTICLES  ಕೃತಿಯ ಮಾರಾಟದಿಂದ ಬಂದ ಹಣ ವೃದ್ಧಾಶ್ರಮಕ್ಕೆ ನೀಡುವ ಸಂಕಲ್ಪ

ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಪೊಲೀಸರು ಹಾಗೂ ಅಧಿಕಾರಿಗಳ ಸಕ್ಷಮ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ.