ಮಂಗಳೂರು: ಸಚಿವ ಯು ಟಿ ಖಾದರ್ ಕಾಲೇಜೊಂದರ ವಿದ್ಯಾರ್ಥಿಗಳ ಜೊತೆ ಕೆಸರು ಗದ್ದೆಯಲ್ಲಿ ಕುಣಿದುಕುಪ್ಪಳಿಸಿದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯ ಕಾಲೇಜೊಂದು ‘ವಿದ್ಯಾರ್ಥಿಗಳ ನಡಿಗೆ ರೈತರ ಹಡಿಲು ಭೂಮಿಯ ಕಡೆಗೆ’ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಓಟದ ಸ್ಪರ್ಧೆಗೆ ಇಳಿದರು.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಹೆಲ್ತ್ ಬುಲೆಟಿನ್

ಅಚ್ಚರಿಯೆಂಬಂತೆ ಸಚಿವ ಖಾದರ್ ಕೂಡ ವಿದ್ಯಾರ್ಥಿಗಳೊಂದಿಗೆ ಕೆಸರು ಗದ್ದೆಗೆ ಇಳಿದೇ ಬಿಟ್ಟರು. ಅಷ್ಟೇ ಅಲ್ಲ, ಓಟದಲ್ಲಿ ವಿದ್ಯಾರ್ಥಿಗಳನ್ನು ಸಚಿವರು ಹಿಂದಿಕ್ಕಿದರು. ಓಡುವ ರಭಸದಲ್ಲಿ ಕೆಸರು ಗದ್ದೆಯಲ್ಲಿ ಬಿದ್ದರು. ಆಗ ಸಚಿವರು ಗುರುತೇ ಸಿಗದಂತಾಯಿತು. ಇದೇ ವೇಳೆ, ವಿದ್ಯಾರ್ಥಿಗಳೊಂದಿಗೆ ಟಿಲ್ಲರ್ ಮೂಲಕ ಕೆಲವು ಕಾಲ ಉಳುಮೆ ಕೂಡ ಮಾಡಿದರು.

RELATED ARTICLES  ಪದ್ಮಾವತಿ ವಿವಾದ: ನ.28ರಂದು ಸುಪ್ರೀಂ ವಿಚಾರಣೆ.