ಶಿರಸಿ : ಉತ್ತರಕನ್ನಡದಲ್ಲಿ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿದ್ದು, ತಾಲೂಕಿನ ಹುಳಗೋಳದಲ್ಲಿ ಅನಾರೋಗ್ಯದಿಂದ ಮನನೊಂದಿದ್ದ ಗೃಹಿಣಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಕಳೆದ ಒಂದು ವರ್ಷದಿಂದ ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಂಗಲಾ ಪಟಗಾರ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಈಕೆಗೆ ಸುಮಾರು 36 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

RELATED ARTICLES  ಗೂಡಂಗಡಿಗೆ ನುಗ್ಗಿದ ಲಾರಿ - ಸಿನಿಮೀಯ ರೀತಿಯಲ್ಲಿ ಪಾರಾದ ಜನರು.

ತಲೆನೋವಿನ ಕಾರಣ ಮನ ನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ತಲೆನೋವು ಅದೆಷ್ಟೇ ಚಿಕಿತ್ಸೆ ಕೊಡಿಸಿದರೂ ಕಡಿಮೆಯಾಗಿರಲಿಲ್ಲ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಕುರಿತು ಗೃಹಿಣಿಯ ತಂದೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ಕುಮಟಾ : ಲೈಟ್ ಕಂಬಕ್ಕೆ ಡಿಕ್ಕಿಯಾದ ಪಿಕಪ್ ವಾಹನ : ಏಳು ಕುರಿಗಳು ಸಾವು