ಕಾರವಾರ: ಚಿತ್ತಾಕುಲಾ ಠಾಣೆ ಪೊಲೀಸರು ಎಲೆಕ್ಟ್ರಿಕಲ್ ಅಂಗಡಿಯಲ್ಲಿ 3.81 ಲಕ್ಷ ರೂ. ಮೌಲ್ಯದ ವೈರ್ ಬಂಡಲುಗಳನ್ನು ಕದ್ದೊಯ್ದಿದ್ದವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಥಾನ ಮೂಲದ, ಹಾಲಿ ಉತ್ತರ ಗೋವಾ ನಿವಾಸಿ ಈಶ್ವರಸಿಂಗ್ ರಜಪೂತ ಬಂಧಿತ ಆರೋಪಿ. ಸದಾಶಿವಗಡ ಟೋಲ್‌ನಾಕಾದ ಬಳಿ ಇರುವ ಕುಶಾಲಿ ಕಾಂಪ್ಲೆಕ್ಸ್ನಲ್ಲಿನ ಕೃಷ್ಣ ಕದಂ ಎನ್ನುವವರ ಮಾಲೀಕತ್ವದ ಶಾಂತದುರ್ಗಾ ಅಂಗಡಿಯಲ್ಲಿ ತಿಂಗಳ ಹಿಂದೆ ಅಷ್ಟೇ ನುಗ್ಗಿದ್ದ ಈಶ್ವರಸಿಂಗ್, ಅಂಗಡಿಯಲ್ಲಿದ್ದ ಎಲೆಕ್ಟ್ರಿಕಲ್ ವೈರ್‌ನ ಬಂಡಲುಗಳು ಮತ್ತು ಎಂಸಿಬಿ ಪೀಸ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಎನ್ನಲಾಗಿದೆ.
ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ಕುರಿತು ತನಿಖೆ ನಡೆಸಿದ ಚಿತ್ತಾಕುಲಾ ಠಾಣೆ ಪೊಲೀಸರು, ಖಚಿತ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಡಾ.ಸುಮನ ಡಿ.ಪನ್ನೇಕರ್, ಹೆಚ್ಚುವರಿ ಎಸ್ಪಿ ಎಸ್.ಬದರಿನಾಥ್ ಮತ್ತು ಡಿವೈಎಸ್ಪಿ ವೆಲೆಂಟೈನ್ ಡಿಸೋಜಾರವರುಗಳ ಮಾರ್ಗದರ್ಶನ, ಕದ್ರಾ ಸಿಪಿಐ ಗೋವಿಂದರಾಜ ದಾಸರಿ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚಿತ್ತಾಕುಲಾ ಠಾಣೆ ಪಿಎಸ್‌ಐ ವಿಶ್ವನಾಥ ಎಂ.ನಿಂಗೊಳ್ಳಿ ಹಾಗೂ ಸಿಬ್ಬಂದಿ ಶ್ರೀಕಾಂತ್ ಡಿ.ನಾಯ್ಕ, ಅರುಣ್ ಕಾಂಬ್ಳೆ, ಜಯವಂತ ತಾಯ್ಕೆ, ವಿನಯ್ ಎಸ್.ಕಾಣಕೋಣಕರ, ಪ್ರವೀಣ್ ಗವಣೇಕರ, ಮಹಾದೇವ ಸಿದ್ದಿ, ಬಸವರಾಜ, ಕದ್ರಾ ಠಾಣೆಯ ಎಎಸ್‌ಐ ಮಹಾದೇವ ಘಳ, ಹುಸೇನ್ ಚಪ್ಪರಕರ, ನಾಗರಾಜ ತಿಮ್ಮಾಪುರ ಮತ್ತು ಆರ್.ಕೆ.ಜಗದೀಶ್ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.