ಕುಮಟಾ: ನಾಡು,ನುಡಿ,ನೆಲ,ಜಲ,ಭಾಷೆಯ ಕುರಿತು ಪ್ರತಿಯೊಬ್ಬರಲ್ಲೂ ಆತ್ಮಾಭಿಮಾನ ರೂಢಿಸಿಕೊಳ್ಳುವುದರ ಜೊತೆಯಲ್ಲಿ ತಾಯಿ ಭುವನೇಶ್ವರಿಯನ್ನು ಆರಾಧಿಸುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯ ಮೇರೆಗೆ ಅನುಷ್ಠಾನಗೊಳ್ಳಲಿರುವ “ಕೋಟಿ ಕಂಠ ಗಾಯನ” ವನ್ನು ಯಶಸ್ವಿಗೊಳಿಸೋಣ ಎಂದು ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ಹೇಳಿದರು. ತಮ್ಮ ಕಚೇರಿಯಯಲ್ಲಿ ಸೋಮವಾರ ಕರೆಯಲಾದ “ಕೋಟಿ ಕಂಠ ಗಾಯನ” ದ ಪೂರ್ವಭಾವಿ ಸಭೆಯಲ್ಲಿ ಅವರು
ಮಾತನಾಡಿದರು.
ಈಗಾಗಲೇ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶನದ ಮೇರೆಗೆ ತಾಲೂಕಿನಾದ್ಯಂತ ಆ 28 ರಂದು 11 ಗಂಟೆಗೆ ನಡೆಯಲಿರುವ ಸಾಮೂಹಿಕ ಕೋಟಿ ಕಂಠ ಗಾಯನದಲ್ಲಿ ಏಕಕಾಲಕ್ಕೆ ತಾಲೂಕಿನ 40 ಸಾವಿರಕ್ಕೂ ಹೆಚ್ಚು ಶಾಲಾ, ಕಾಲೇಜು ವಿದ್ಯಾರ್ಥಿಗಳು,ಶಿಕ್ಷಕರು, ಸಿಬ್ಬಂದಿ, ವಿವಿಧ ಸಂಘ,ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಳ್ಳುವಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ತಾಲೂಕಿನಲ್ಲಿ 10 ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕವಾಗಿ ಗಾಯನವನ್ನು ಹೇಳುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಜಯ ಭಾರತ ಜನನಿಯ ತನುಜಾತೆ,ವಿಶ್ವ ವಿನೂತನ ವಿದ್ಯಾ ಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಹಚ್ಚೇವು ಕನ್ನಡದ ದೀಪ,ಬಾರಿಸು ಕನ್ನಡ ಡಿಂಡಿಮವ ಹಾಡುಗಳನ್ನು ಸರ್ಕಾರ ಆಯ್ಕೆ ಮಾಡಿದೆ. ಗೋಕರ್ಣ ಬದ್ರಕಾಳಿ ಹೈಸ್ಕೂಲ ಮೈದಾನ, ಹಿರೇಗುತ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ.ಪೂ ಕಾಲೇಜು,ಬೆಣ್ಣೆ ಕಾಲೇಜು,ಕೊಂಕಣ ಎಜ್ಯುಕೇಶನ್ ಮೈದಾನ,ಪ್ರಗತಿ ವಿದ್ಯಾಲಯ ಮೂರೂರು, ಗಿಬ್ ಹೈಸ್ಕೂಲ ಕುಮಟಾ, ಸರ್ಕಾರಿ ಪದವಿ ಕಾಲೇಜು ಕುಮಟಾ, ಡಾ.ಎ.ವಿ,ಬಾಳಿಗಾ ಕಲಾ,ವಿಜ್ಷಾನ ,ವಾಣಿಜ್ಯ ಕಾಲೇಜು,ಸಮೂಹ ಸಂಸ್ಥೆಗಳು ಹಾಗೂ ವಿಶೆಷವಾಗಿ ಜನತಾ ವಿದ್ಯಾಲಯ ಬಾಡ-ಕಾಗಾಲ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ ಹಾಗೂ ಕುಮಟಾ ಕನ್ನಡ ಸಂಘ(ರಿ.) ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಅದ್ದೂರಿಗಾಗಿ ನಡೆಸಲು ಉದ್ದೇಶಿಸಲಾಗಿದ್ದು, ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ,ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್, ತಹಸೀಲ್ದಾರ ವಿವೇಕ ಶೇಣ್ವಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು,ಜನಪ್ರತಿನಿಧಿಗಳು
ಹಾಗೂ ಕುಮಟಾ ಕನ್ನಡ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು,ಸದಸ್ಯರುಗಳು ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಕಾರಣ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡುಯಶಸ್ವಿಗೊಳಿಸಬೇಕು ಎಂದು
ಉಪವಿಭಾಗಾಧಿಕಾರಿಗಳು ತಿಳಿಸಿದರು.
ತಹಸೀಲ್ದಾರ ವಿವೇಕ ಶೇಣ್ವಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ, ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ,ಕ.ಸಾ.ಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಕರ್ನಾಟಕ ಜರ್ನಲಿಸ್ಟ ಯೂನಿಯನ್ ಅಧ್ಯಕ್ಷ ಅನ್ಸಾರ ಶೇಖ್, ಹಿರಿಯ ಪತ್ರಕರ್ತ ಗಣೇಶ ರಾವ್, ಕುಮಟಾ ಕನ್ನಡ ಸಂಘದ ಕೋಶಾಧ್ಯಕ್ಷ ಶಿವಯ್ಯ ಹಿಣಿ, ಪ್ರಾಚಾರ್ಯರಾದ ಶ್ರೀನಿವಾಸ ಶೇಣ್ವಿ, ಎನ್.ಜಿ.ಹೆಗಡೆ, ಉಪನ್ಯಾಸಕಿ ಶ್ರೀದೇವಿ ಭಟ್ಟ, ತಾ.ಪಂ,ಪುರಸಭಾ ಅಧಿಕಾರಿಗಳು ಇನ್ನಿತರರು ಇದ್ದರು.