ಶಿರಸಿ: ತಾಲೂಕಿನ ಆರೆಕೊಪ್ಪದಲ್ಲಿರುವ ಅಬ್ದುಲ್ ಬಶೀರ ಎಂಬುವವರ ಮನೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ನಗದು ಹಾಗೂ ಒಂದು ಬಂಗಾರದ ಸರವನ್ನು ಕಳವು ಮಾಡಲಾಗಿದೆ. ಮನೆಯ ಹಂಚನ್ನು ತೆಗೆದು ಒಳಗೆ ಇಳಿದಿರುವ ಕಳ್ಳರು, ಮೂರು ಗೋದ್ರೆಜ್ ಕಪಾಟ್ ಒಡೆದು ನಗದು ಮತ್ತು ಬಂಗಾರದ ಸರವನ್ನು ಕದ್ದೊಯ್ದಿದ್ದಾರೆ.

RELATED ARTICLES  ನಿಲ್ಲಿಸಿಟ್ಟಿದ್ದ ಅಂಬುಲೆನ್ಸ್ ನಿಂದ ವಸ್ತುಗಳನ್ನು ಕದ್ದ ಆರೋಪಿ ಅಂದರ್..!

ಹೆಂಡತಿಗೆ ಅನಾರೋಗ್ಯ ಕಾಡಿದ್ದರಿಂದ ಅಬ್ದುಲ್ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅವರು ನಿಧನರಾಗಿದ್ದರಿಂದ ಮತ್ತೊಂದು ಮನೆಯಲ್ಲಿ ವಿಧಿವಿಧಾನ ಮುಗಿಸಿ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಮನೆಗೆ ಮರಳಿದ್ದರು.

RELATED ARTICLES  ಈ ದಿನ ಕೆಲ ರಾಶಿಯವರಿಗೆ ಅತ್ಯಂತ ಶುಭ ದಿನ! ಕೆಲವರಿಗೆ ಇದೆ ಕಿರಿ ಕಿರಿ! ನಿಮ್ಮ ರಾಶಿಯ ಮೇಲಿದೆ ದಿನದ ಭವಿಷ್ಯ!

ತಮ್ಮ ಮಗನೊಂದಿಗೆ ಆರೆಕೊಪ್ಪದ ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಕಂಡುಬಂದಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಹೆಚ್ಚಿನ ತನಿಖೆಗಾಗಿ ಶ್ವಾನದಳವನ್ನು ಕರೆಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.