ಹಳಿಯಾಳ:ಗದಗನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಇಲ್ಲಿನ ಕ್ರೀಡಾ ವಸತಿನಿಲಯದ 5 ಮಹಿಳಾ ಕುಸ್ತಿಪಟುಗಳು ಚಿನ್ನದ ಪದಕದೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಶ್ವೇತಾ ಅಣ್ಣಿಗೇರಿ 50 ಕೆ.ಜಿ ವಿಭಾಗದಲ್ಲಿ, ಶಾಲಿನಾ ಸಿದ್ದಿ 53 ಕೆ.ಜಿ ವಿಭಾಗದಲ್ಲಿ, ಗಾಯತ್ರಿ ಸುತಾರ 55 ಕೆ.ಜಿ ವಿಭಾಗದಲ್ಲಿ, ಲಕ್ಷ್ಮಿ ಪಾಟೀಲ 57 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

RELATED ARTICLES  ಹೆಂಡತಿಯಮೇಲೆ ಅನುಮಾನ : ನೇಣಿಗೆ ಶರಣಾದ ವ್ಯಕ್ತಿ

ಕುಸ್ತಿ ಅಖಾಡಾದಲ್ಲಿ ತರಬೇತಿ ಪಡೆಯುತ್ತಿರುವ ಬಾಲಕರ ವಿಭಾಗದ 72 ಕೆ.ಜಿ ವಿಭಾಗದಲ್ಲಿ ಅಭಿಮನ್ಯು ಘಾಡಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಪಾತ್ರನಾಗಿದ್ದಾನೆ ಎನ್ನಲಾಗಿದೆ.

RELATED ARTICLES  ಟಿ.ಎಸ್.ಎಸ್. ಗ್ರೀನ್ ಗೋಲ್ಡ್ ಗೊಬ್ಬರ ಖರೀದಿಸಿದ ಗ್ರಾಹಕರ ಲಕ್ಕಿ ಡ್ರಾ..! ವಿಜೇತರು ಯಾರು ಗೊತ್ತೇ?

ವಿಜೇತ ಕುಸ್ತಿಪಟುಗಳಿಗೆ ಮತ್ತು ಕುಸ್ತಿ ತರಬೇತುದಾರ ತುಕಾರಾಮ ಗೌಡಾ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣಕುಮಾರ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.