ಕಾರವಾರ : ಶಾಲೆಗೆ ಹೋದ ವಿದ್ಯಾರ್ಥಿನಿ ಕಾಣೆಯಾಗಿದ್ದು ನಂತರ ಸಂಬಂಧಿಕರ ಮನೆಗೆ ಬಂದ ಬಾಲಕಿ ತನ್ನನ್ನು ಅಪಹರಣ ಮಾಡಿ ವ್ಯಾನಿನಲ್ಲಿ ಹೊತ್ತೊಯ್ದಿದ್ದರು ನಾನು ತಪ್ಪಿಸಿಕೊಂಡು ಬಂದೆ ಎಂದು ಹೇಳುವ ಮೂಲಕ ದಾಂಡೇಲಿಯಲ್ಲಿ ಇಡೀ ನಗರವನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದು, ಘಟನೆಯ ಸತ್ಯತೆ ತಿಳಿದು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಈ ರೀತಿಯೂ ಪ್ರಕರಣವು ತಿರುವು ಪಡೆಯುತ್ತಾ ಎಂಬುದನ್ನು ಅಂದುಕೊಂಡಿರದ ಜನರಿಗೆ ಇದು ಬಿಗ್ ಶಾಕ್ ನೀಡಿದಂತಾಗಿದೆ.

ಹಳೆದಾಂಡೇಲಿ ಭಾಗದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 12 ವರ್ಷದ ವಿದ್ಯಾರ್ಥಿನಿ ಶಾಲೆಗೆ ಹೋಗಲು ಮನಸ್ಸಿಲ್ಲದೆ ಈ ರೀತಿಯಾಗಿ ಅಪಹರಣದ ಪ್ರಕರಣದ ಕುರಿತಾಗಿ ಸುದ್ದಿ ಹಬ್ಬಿಸಿದ್ದು, ಮುಂದೆ ನಡೆಯಲಿದ್ದ ಪರೀಕ್ಷೆ ಗೆ ಹೆದರಿ ಅಪಹರಣದ ಕಥೆಯನ್ನೇ ಕಟ್ಟಿ ಒಂದಿಷ್ಟು ಕಾಲ ಅವಾಂತರ ಸೃಷ್ಟಿಸಿದ್ದಾಳೆ ಎಂಬ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ – ಹೆಂಡತಿಯ ಅಂತ್ಯಕ್ರಿಯೆ ಮುಗಿಸಿ ಬರುವ ಒಳಗಾಗಿ ಮನೆಗೆ ಕನ್ನ ಹಾಕಿದ ಖಧೀಮರು

RELATED ARTICLES  ಕದಂಬ ನೌಕಾನೆಲೆಯ ಬೋಟ್ ಇಂಜಿನ್ ನಲ್ಲಿ ಬೆಂಕಿ ಅವಘಡ.

ಮನೆಯಿಂದ ಶಾಲಾ ಸಮವಸ್ತ್ರ ಧರಿಸಿ ಬಂದ ಈ ವಿದ್ಯಾರ್ಥಿನಿ ನೇರವಾಗಿ ಶಾಲೆಗೆ ಹೋಗದೆ ಕಿತ್ತೂರು ಚನ್ನಮ್ಮ ರಸ್ತೆಯವರೆಗೂ ಹೋಗಿ ಅಲ್ಲೇ ಪಕ್ಕದಲ್ಲೇ ಇರುವ ಮಿರಾಶಿ ಗಲ್ಲಿಯ ತನ್ನ ಅತ್ತೆಯ ಮನೆ ಸೇರಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯ ಅತ್ತೆ ಯ ಮನೆಯವರು ವಿಚಾರಿಸಿದಾಗ ತನ್ನನ್ನು ಮಾರುತಿ ವ್ಯಾನಲ್ಲಿ ಬಂದ ಯಾರೋ ಇಬ್ಬರು ಕಿಡ್ನಾಪ್ ಮಾಡಿದ್ದರು. ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ವಾಹನವನ್ನು ನಿಲ್ಲಿಸಿದಾಗ ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಕಥೆಯನ್ನ ಕಟ್ಟಿದ್ದಾಳೆ.

ಇದನ್ನೂ ಓದಿ – ಬಸ್ ನ ಬ್ರೇಕ್ ಫೇಲ್ ಆಗಿ ಅಪಘಾತ : ಹಿಮ್ಮುಖವಾಗಿ ಚಲಿಸಿದ ಬಸ್

ನಂತರ ಆ ವಿದ್ಯಾರ್ಥಿನಿಯ ಸಂಬಂಧಿಗಳು ಈ ವಿಷಯವನ್ನು ಆಕೆಯ ಪಾಲಕರಿಗೆ ತಿಳಿಸಿದ್ದಾರೆ. ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಲಕರು ಸಹ ತಮ್ಮ ಮಗಳ ಮಾತನ್ನು ನಂಬಿ ಅಪಹರಣಕಾರರು ಬಂದು ನಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ತಲೆಕೆಡಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯನ್ನೇ ಕರೆದುಕೊಂಡು ನೀನು ಯಾವ ದಾರಿಯಲ್ಲಿ ಹೋಗುತ್ತಿದ್ದೆ. ಎಲ್ಲಿಂದ ಕಿಡ್ನಾಪ್ ಮಾಡಿದ್ದರು ಎಂಬ ಮಾಹಿತಿಯನ್ನ ಪಡೆಯುತ್ತ ಹೋಗಿದ್ದಾರೆ. ಅಲ್ಲಿಯೂ ಆ ವಿದ್ಯಾರ್ಥಿನಿ ಅಪಹರಣವಾಯಿತೆಂಬುದನ್ನೇ ನಂಬಿಸುತ್ತ ಹೋಗಿದ್ದಾಳೆ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 07/10/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ …

ಆಕೆ ಹೋದ ಹಾಗೂ ನಿಂತ ಮತ್ತು ತಪ್ಪಿಸಿಕೊಂಡ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಯಾವ ಸಿಸಿ ಕ್ಯಾಮರಾಗಳಲ್ಲಿಯೂ ಕೂಡ ಆಕೆಯ ಚಲನವಲನ ಗಳಾಗಲಿ ಅಥವಾ ಮಾರುತಿ ವ್ಯಾನು ನಿಂತ ಬಗ್ಗೆ ಸುಳಿವು ಸಿಗಲಿಲ್ಲ. ಮತ್ತೆ ಮತ್ತೆ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದಾಗ ಆಕೆ ಅದೇ ಕತೆ ಹೇಳುತ್ತಿದ್ದಳಾದರೂ ಕೂಡ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ನಂತರ ಆಕೆಯನ್ನು ಪುಸಲಾಯಿಸಿ ಕೇಳಿದಾಗ ಆಕೆ ನಡೆದಿರುವ ಸತ್ಯವನ್ನು ಒಪ್ಪಿಕೊಂಡು ಶಾಲೆ ಆರಂಭವಾದ ದಿನ ಹಾಗೂ ಪರೀಕ್ಷೆಗೆ ಅಂಜಿ ತಾನು ಈ ರೀತಿ ಮಾಡಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಉತ್ತರಕನ್ನಡದ ಪ್ರಮುಖ ಎಲ್ಲಾ ಸುದ್ದಿಗಳನ್ನೂ ಓದಬೇಕೆ..? ಹಾಗಾದರೆ ಈ ಲಿಂಕ್ ಒತ್ತಿ. https://satwadhara.news/category/local-news-uttara-kannada/