ಹೊನ್ನಾವರ : ವಾಯುಭಾರ ಕುಸಿತದಿಂದಾಗಿ ಕರಾವಳಿಯೂ ಸೇರಿದಂತೆ ರಾಜ್ಯದಲ್ಲಿ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶದ ಬಂಗಾಳಕೊಲ್ಲಿಯಲ್ಲಿ ಕಡಿಮೆ ಪ್ರಮಾಣದ ವಾಯುಭಾರ ಕುಸಿತವಾಗಿದ್ದು, ವಾರಾಂತ್ಯದ ವೇಳೆಗೆ ಅದು ತೀವ್ರ ಸ್ವರೂಪ ಪಡೆದುಕೊಂಡು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

RELATED ARTICLES  ಕಾರ್ಮಿಕನ ಮಗ ಎಂ.ಬಿ.ಬಿ.ಎಸ್ ಮಾಡಿರುವುದು ನಮ್ಮೆಲ್ಲರ ಹೆಮ್ಮೆ: ದಿನಕರ ಶೆಟ್ಟಿ

ಹಬ್ಬದ ಸಂತಸದಲ್ಲಿದ್ದ ಜನರಿಗೆ ಮಳೆಯ ಅಡ್ಡಿಪಡಿಸುವ ಭೇಟಿ ಎದುರಾಗಿದ್ದು ಇದೇ ರೀತಿ ಮಳೆ ಮುಂದುವರೆದರೆ ಹಬ್ಬದ ಕಳೆ ಕಳೆಯಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕಳೆದ ಹಲವು ದಿನಗಳಿಂದ ಸಂಜೆಯಾಗುತ್ತಿದ್ದಂತೆ‌ ವರುಣ ಕಾಟ ಕೊಡುತ್ತಿದ್ದು. ಕೆಲಸ ಮುಗಿಸಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಮಾಡಲು ಯೋಜಿಸಿದ ಜನರಿಗೆ ಮಳೆ ದೊಡ್ಡ ಸಮಸ್ಯೆಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಜನ ಕಿಕ್ಕಿರಿದು ಜಮಾಯಿಸುತ್ತಿದ್ದಾರೆ. ಆದರೆ ಸಂಜೆಯಾದರೆ ಸಾಕು ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಬೇಸರಗೊಂಡಿದ್ದಾರೆ. ಇದು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ತಯಾರಿಯಲ್ಲಿರುವ ಜನರಿಗೆ ನಿರಾಶೆಯನ್ನು ತಂದಿದೆ.

RELATED ARTICLES  ವಿದ್ಯಾವಂತರಾದ ಪ್ರತಿ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳನ್ನು ಬತ್ತಳಿಕೆಯಲ್ಲಿರಿಸಿಕೊಂಡು ಕೃಷಿ ಕ್ಷೇತ್ರಕ್ಕೆ ಧುಮುಕ ಬೇಕಿದೆ