ಶಿರಸಿ : ಉತ್ತರ ಕನ್ನಡದಲ್ಲಿ ಸುಲಿಗೆ ಪ್ರಕರಣ ಹಾಗೂ ದರೋಡೆ ಪ್ರಕರಣಗಳು ವರದಿಯಾಗುತ್ತಿದ್ದು ಜನತೆಯಲ್ಲಿ ಕೊಂಚಮಟ್ಟಿಗೆ ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಕಳೆದ ಕೆಲವು ದಿನದ ಹಿಂದೆ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ ವರದಿಯಾಗಿತ್ತು. ಇದೀಗ ಇನ್ನೊಂದು ಪ್ರಕರಣ ವರದಿಯಾಗಿದೆ.

RELATED ARTICLES  ಹಿರೇಗುತ್ತಿ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸೆಕೆಂಡರಿ ಹೈಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನ

ಬೆಳಗಾವಿಯಿಂದ ಸಿದ್ದಾಪುರದ ಕಡೆಗೆ ಹೋಗುತಿದ್ದ ಅಡಕೆ ವ್ಯಾಪಾರಿಯೊಬ್ಬನ ಕಾರನ್ನು ಅಡ್ಡಗಟ್ಟಿ 50 ಲಕ್ಷ ದರೋಡೆ ಮಾಡಿರುವ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂದು ಸಂಜೆ 5-30 ರ ಸುಮಾರಿಗೆ ಅಡಕೆ ವ್ಯಾಪಾರದ ನಿಮಿತ್ತ ಹೊರಟಿದ್ದ ವರ್ತಕನ ವಾಹನವನ್ನು KA-05MC-1597 ಸಂಖ್ಯೆಯ ಕೆಂಪು ರಿಡ್ಜ್ ಕಾರಿನಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿ ಹಣ ದರೋಡೆ ಮಾಡಿರುವ ಕುರಿತು ದೂರು ನೀಡಲಾಗಿದ್ದು ಬನವಾಸಿ ಪೊಲೀಸರು ಪ್ರಕರಣದ ತನಿಖೆ ನಡೆಸುತಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

RELATED ARTICLES  ತಾಲೂಕಿನ ಜನರಲ್ಲಿದ್ದ ಭಯ ದೂರ ಮಾಡಲು ಪಥ ಸಂಚಲನ ನಡೆಸಿದ ರ್ಯಾಪಿಡ್ ಪೋಲೀಸ್ ಪೋರ್ಸ.