ಹೊನ್ನಾವರ: ಹೊನ್ನಾವರ ಹಾಗೂ ಸುತ್ತಮುತ್ತಲ ತಾಲೂಕುಗಳಲ್ಲಿ ಚಿರತೆಯ ಭಯ ಪ್ರಾರಂಭವಾಗಿದ್ದು, ಚಿರತೆಯು ಕಾಣಿಸಿಕೊಂಡು ಅಲ್ಲಲ್ಲಿ ಭಯದ ವಾತಾವರಣವನು ಹುಟ್ಟಿಸುತ್ತಿದೆ. ಹಳ್ಳಿ ಪ್ರದೇಶಗಳಲ್ಲಿ ಚಿರತೆಗಳ ಓಡಾಟದ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿದ್ದವು. ಇಂದೊಂದು ಆಘಾತ ಕಾರಿ ವಿಷಯ ವರದಿಯಾಗಿದೆ. ತಾಲೂಕಿನ ಸಾಲ್ಕೊಡಿನಲ್ಲಿ ಕೆಲಸ ಮುಗಿಸಿ ಬೈಕ್ ಮೂಲಕ ಮನೆಗೆ ವಾಪಸ್ಸಾಗುತ್ತಿರುವ ವೇಳೆ ಏಕಾಏಕಿ ಗುಡ್ಡದ ಮೇಲಿದ್ದ ಚಿರತೆ ಬೈಕ್ ಸವಾರರ ಮೇಲೆರಗಿ ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಇದನ್ನೂ ಓದಿ – ಆತ್ಮಹತ್ಯೆಗೆ ಶರಣಾದ ವ್ಯಕ್ತಿ : ರಾತ್ರಿಯ ಸಮಯದಲ್ಲಿ ನೇಣಿಗೆ ಶರಣಾದ
ಕಳೆದ ಎರಡು ದಿನದ ಹಿಂದೆ ಇದೇ ಗ್ರಾಮದ ಬಾವಿಯಲ್ಲಿ ಚಿರತೆ ಬಿದ್ದಿದ್ದು, ಊರಗತಜ್ಞರ ಸಹಕಾರದ ಮೇರೆಗೆ ಅರಣ್ಯ ಇಲಾಖೆಯವರು ಬೋನಿನಲ್ಲಿ ಚಿರತೆ ಸೆರೆಹಿಡಿದು ಬಿಟ್ಟಿದ್ದರು. ಇದರಿಂದ ಸ್ಥಳಿಯರು ನಿಟ್ಟುಸಿರು ಬಿಡುವಾಗಲೇ ಮತ್ತೆ ಇಂತಹ ಘಟನೆ ಸಂಭವಿಸಿದ್ದು, ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.
ಹುಡುಗೋಡದ ಮಾಬ್ಲ ನಾಯ್ಕ ಮತ್ತು ಬಳ್ಕೂರಿನ ಗಜುನಾಯ್ಕ ಗಾಯಗೊಂಡವರಾಗಿದ್ದು, ಬೈಕ್ ನಲ್ಲಿದ್ದ ಓರ್ವ ಸವಾರನ ಮೊಣಕಾಲಿಗೆ ಚಿರತೆ ಕಚ್ಚಿದೆ ಎನ್ನಲಾಗಿದ್ದು, ಉಗುರಿನಿಂದ ಪರಚಿದ ಗಾಯಗಳಾಗಿವೆ.
ಇದನ್ನೂ ಓದಿ – ಕಾರನ್ನು ಅಡ್ಡ ಗಟ್ಟಿ 50 ಲಕ್ಷ ರೂಪಾಯಿ ಲಾಪಟಾಯಿಸಿದ ಕದೀಮರು
ಇವರು ಕೆಲಸಮುಗಿಸಿಕೊಂಡು ಸಾಲ್ಕೋಡಿನಿಂದ ವಾಪಸ್ ಬರುವಾಗ ಎಸ್.ಕೆ.ಪಿ ಕ್ರೀಡಾಂಗಣದ ಸಮೀಪ ಚಿರತೆ ದಾಳಿ ಮಾಡಿದೆ. ಗಾಯಾಳುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಗಾಯಾಳುಗಳು ಚೇತರಿಸಿಕೊಂಡಿದ್ದಾರೆ..