ಅಂಕೋಲಾ : ತಾಲೂಕಿನ ದೊಡ್ಡ ಅಲಗೇರಿ ಗ್ರಾಮದಲ್ಲಿ ಕೃಷಿ ಕೆಲಸಗಾರನೊಬ್ಬ ತೆಂಗಿನ ಕಾಯಿ ಕೊಯ್ಯಲು ತೆಂಗಿನ ಮರ ಹತ್ತಿದ ಸಂದರ್ಭದಲ್ಲಿ ಅಕಸ್ಮಿಕವಾಗಿ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದು ಮೃತ ಪಟ್ಟಿರುವ ದುರ್ಘಟನೆ ನಡೆದಿದೆ. ಈತ ದೊಡ್ಡ ಅಲಗೇರಿ ಗ್ರಾಮದ ಸುಭಾಷ ತಾಮ್ಸೆ ಎನ್ನುವವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಯಲು ಅಗತ್ಯ ಸುರಕ್ಷತಾ ಸಲಕರಣೆಗಳೊಂದಿಗೆ ಮರ ಹತ್ತಿ ತೆಂಗಿನ ಕಾಯಿ ತೆಗೆಯುತ್ತಿದ್ದಾಗ ಮರದಿಂದ ಕೆಳಗೆ ಬಿದ್ದು ಕೈ ಕಾಲು ಮತ್ತಿತರ ಭಾಗಗಳಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ – ಮುಗಿಯದ ಚಿರತೆ ಕಾಟ : ಬೈಕ್ ಮೇಲೆಯೇ ಎರಗಿದ ಚಿರತೆ : ಇಬ್ಬರು ಬಚಾವಾಗಿದ್ದೇ ಹೆಚ್ಚು..!
ದೊಡ್ಡ ಅಲಗೇರಿ ನಿವಾಸಿ ನಾರಾಯಣ ತಾಕು ನಾಯ್ಕ ಮೃತ ದುರ್ದೈವಿಯಾಗಿದ್ದು ಮರದಿಂದ ಬಿದ್ದ ಈತನನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿ ಮೃತ ಪಟ್ಟ ಕುರಿತು ಖಚಿತಪಡಿಸಿದರು ಎಂದು ತಿಳಿದು ಬಂದಿದೆ. ಮೃತನ ತಾಯಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.