ಹೊನ್ನಾವರ : ಪರೇಶ ಮೇಸ್ತಾ ಸಾವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಿಬಿಐ ವರದಿಯೂ ಪ್ರಕಟವಾಗಿದೆ. ಇದೀಗ ಆ ಬಗ್ಗೆ ಅನೇಕ ಅಭಿಪ್ರಾಯಗಳು ವ್ಯಕ್ರವಾಗಿದ್ದು, ಪರೇಶ್ ಮೇಸ್ತ ಹತ್ಯೆ ಪ್ರಕರಣದಲ್ಲಿ ಸಿಬಿಐ ರಿಪೋರ್ಟ್ ಅಸಮಾಧಾನಕರವಾಗಿದ್ದು, ಪ್ರಕರಣದಲ್ಲಿ ಸಾಕ್ಷಿ ನಾಶವಾಗಿರುವ ಸಾಧ್ಯತೆ ಹೆಚ್ಚಿರುವುದರಿಂದ ಪರೇಶ್ ಮೇಸ್ತ ಅವರ ತಂದೆ ಕಮಲಾಕರ ಮೇಸ್ತ ಅವರ ಆಶಯದಂತೆ ಪ್ರಕರಣವನ್ನು ಮರುತನಿಖೆ ನಡೆಸಲು ಕಮಲಾಕರ ಮೇಸ್ತ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಲಾಯಿತು ಎಂದು ಶಾಸಕ ದಿನಕರ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

RELATED ARTICLES  ಹಸುಗೂಸಿನೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ.

ಮನವಿಯಲ್ಲಿ ಏನಿದೆ..?

IMG 20221020 WA0015
IMG 20221020 WA0016

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ತಕ್ಷಣ ಸಂಭಂದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಮರುತನಿಖೆಗೆ ಕ್ರಮ ಜರುಗಿಸಿ, ಪರೇಶ್ ಮೇಸ್ತ ಕುಟುಂಬದವರೊಂದಿಗೆ ನಿಲ್ಲುವ ವಚನವನ್ನು ಕಮಲಾಕರ ಮೇಸ್ತ ಅವರಿಗೆ ನೀಡಿದರು ಎನ್ನಲಾಗಿದೆ.

ಇದನ್ನೂ ಓದಿ – ಮರ ಹತ್ತಿದ ಸಂದರ್ಭದಲ್ಲಿ ಅವಘಡ : ಕೊನೆಯುಸಿರೆಳೆದ ಕೆಲಸಗಾರ

RELATED ARTICLES  ಮಾತು-ಬರವಣಿಗೆಯಲ್ಲಿ ವಿದ್ಯಾರ್ಥಿಗಳು ಪಳಗಬೇಕು : ಈಶ್ವರ ನಾಯ್ಕ

ಈ ಹಿಂದೆಯೂ ನಮ್ಮ ಪಕ್ಷ ಪರೇಶ್ ಮೇಸ್ತ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಕುಟುಂಬದವರೊಂದಿಗೆ ನಿಂತಿದೆ, ಈಗಲೂ ಅವರೊಂದಿಗೆ ನಿಲ್ಲಲಿದ್ದೇವೆ ಎಂದಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ ಹಾಗೂ ಭಟ್ಕಳ ಶಾಸಕರಾದ ಶ್ರೀ ಸುನಿಲ್ ನಾಯ್ಕ, ಬಿಜೆಪಿ ಮುಖಂಡ ಕುಮಾರ ಮಾರ್ಕಾಂಡೆ ಅವರು ಉಪಸ್ಥಿತರಿದ್ದರು.