ಕಾರವಾರ: ಖಾಸಗಿ ಕಂಪನಿಯೊಂದರಲ್ಲಿ ಮಗನಿಗೆ ಕೆಲಸ ಕೊಡಿಸುವ ಆಸೆ ತೋರಿಸಿ ಮಹಿಳೆಯೋರ್ವರು ಆತನ ತಾಯಿಯಿಂದ ಬರೋಬ್ಬರಿ 1.96 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕಾಜುಭಾಗ್ ನಿವಾಸಿ ಶಾಂತಿಪ್ರಿಯಾ ಸತೀಶ ನಾಯ್ಕ ವಂಚನೆಗೆ ಒಳಗಾದ ಮಹಿಳೆಯಾಗಿದ್ದಾಳೆ.
ಶಾಂತಿಪ್ರಿಯಾ ಅವರ ಸಂಬಂಧಿಯೇ ಆಗಿರುವ ಕಾರವಾರ ಮೂಲದ ಅಕ್ಷತಾ ಪ್ರೇಮಾನಂದ ನಾಯ್ಕ ಎನ್ನುವವರು ತಾನು ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಶಿಪ್ರಾ ರೈ ಹಾಗೂ ಶಿಶಿರ ಶೆಟ್ಟಿಯ ಪರಿಚಯವಿದೆ ಎಂದು ನಂಬಿಸಿದ್ದರು.
ಇದನ್ನೂ ಓದಿ – ಅಯ್ಯಯ್ಯೋ ಮತ್ತೆ ಪ್ರಾರಂಭವಾಯಿತು ಚಿರತೆ ಕಾಟ : ಬೆಚ್ಚಿ ಬೇಡುತ್ತಿದ್ದಾರೆ ಹೊನ್ನಾವರದ ಜನರು
ಈ ವೇಳೆ ಶಾಂತಿಪ್ರಿಯಾ ಬಳಿ ನಿನ್ನ ಮಗನಿಗೆ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಟ್ರೇನಿಂಗ್ ಕೊಡಿಸುವ ನೆಪದಲ್ಲಿ 80 ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ. ಅಲ್ಲದೇ ಕಂಪನಿಯ ಇಮೇಲ್‌ನಿಂದ ಸರ್ಟಿಫಿಕೇಟ್, ಐಡಿ ಕಾರ್ಡ್‌ನಂತಹ ಕೆಲವು ದಾಖಲೆಗಳನ್ನು ಸಹ ಕಳುಹಿಸಿದ್ದು, ಇದನ್ನು ಶಾಂತಿಪ್ರಿಯಾ ನಂಬಿದ್ದರು.
ಇದನ್ನೂ ಓದಿ – ಪರೇಶ್ ಮೇಸ್ತಾ ಪ್ರಕರಣಕ್ಕೆ ಮತ್ತೆ ಸಿಗಲಿದೆಯೇ ಟ್ವಿಸ್ಟ್ : ತಂದೆಯಿಂದ ಮುಖ್ಯಮಂತ್ರಿ ಭೇಟಿ.
ಇದಾದ ಬಳಿಕ ಮತ್ತೆ ಟ್ರೇನಿಂಗ್ ನೆಪದಲ್ಲಿ ಹೆಚ್ಚುವರಿಯಾಗಿ ಒಮ್ಮೆ 30 ಸಾವಿರ ಹಾಗೂ ಇನ್ನೊಮ್ಮೆ 86 ಸಾವಿರ ರೂಪಾಯಿ ಪಡೆದಿದ್ದು ಒಟ್ಟೂ 1.96 ಲಕ್ಷ ರೂಪಾಯಿಗಳನ್ನು ಪಡೆದು ಕೆಲಸ ಕೊಡಿಸದೇ ವಂಚನೆ ಮಾಡಿದ್ದಾರೆ ಎಂದು ಶಾಂತಿಪ್ರಿಯಾ ಅವರು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.