ಅಂಕೋಲಾ : ಸಾಮಾಜಿಕ ಜಾಲತಾಣಗಳ ಮೂಲಕ ಒಬ್ಬರು ಇನ್ನೊಬ್ಬರಿಗೆ ಮೋಸ ಮಾಡುವ ಪ್ರಕರಣಗಳು ಅನೇಕ ಕಡೆಗಳಿಂದ ವರದಿಯಾಗುತ್ತಿದ್ದು, ಇಂತಹದೇ ಪ್ರಕರಣ ಇದೀಗ ಉತ್ತರ ಕನ್ನಡದಾದ್ಯಂತ ಮತ್ತೆ ಸುದ್ದಿ ಮಾಡಿದೆ. ಪೋಲಿಸ್ ಅಧಿಕಾರಿಯೊಬ್ಬರ ಹೆಸರನ್ನೇ ಬಳಸಿಕೊಂಡು ಅವರ ಫೋಟೋ ಸಹಿತ ನಕಲಿ ಖಾತೆ ತೆರೆದು ಹಣದ ಬೇಡಿಕೆ ಇಟ್ಟಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ.

ತಾಲೂಕಿನ ಪಿಎಸೈ ಪ್ರವೀಣಕುಮಾರ ಅವರ ಹೆಸರು ಹಾಗೂ ಫೊಟೊ ಬಳಸಿಕೊಂಡು ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.
ಪ್ರವೀಣಕುಮಾರ.ಪಿಎಸೈ ಎಂಬ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಅವರ ಸ್ನೇಹಿತರಿಗೆ, ಪರಿಚಯಸ್ಥರಿಗೆ ಮೆಸೇಜ್ ಕಳುಹಿಸಿ, ತಮಗೆ ತುರ್ತಾಗಿ ಹಣಬೇಕೆಂದು ಅನೇಕರಿಗೆ ಹಣ ಕೇಳಿದ್ದಾರೆ. ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ವಿನಂತಿಸುತ್ತಿದ್ದಾರೆ.

RELATED ARTICLES  ಅಗಲಿದ ಚೇತನಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕುಮಟಾ ವೈಭವದ ಕಾರ್ಯಕ್ರಮದಲ್ಲಿ ಬದಲಾವಣೆ.

ಇದನ್ನೂ ಓದಿ – ಸಂಬಂಧಿಕರೇ ಮಾಡಿದರೂ ಮಹಾಮೋಸ : ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ತಾಯಿ

ವಂಚಕರಿಂದ ಸಂದೇಶ ಸ್ವೀಕರಿಸಿದ ಸ್ನೇಹಿತರು ಪ್ರವೀಣ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನನ್ನ ಹೆಸರು ಮತ್ತು ಫೋಟೋ ಬಳಸಿ ಯಾರೋ ಇನ್‌ಸ್ಟಾಗ್ರಾಂ ನಕಲಿ ಖಾತೆ ತೆರೆದು ಸಾರ್ವಜನಿಕರಲ್ಲಿ ಹಣ ಕೇಳುತ್ತಿರುವುದು ಕಂಡುಬಂದಿದೆ. ಯಾರು ಕೂಡ ಹಣ ಕಳುಹಿಸಬೇಡಿ ಎಂದು ಪಿಎಸೈ ಪ್ರವೀಣಕುಮಾರ ಅವರು ಮನವಿ ಮಾಡಿದ್ದಾರೆ.

RELATED ARTICLES  ಇಂದಿನ(ದಿ-15/03/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಇನ್ನಷ್ಟು ಉತ್ತರ ಕನ್ನಡದ ಸುದ್ದಿಗಳನ್ನು ಉಚಿತವಾಗಿ ಓದಲು ಈ ಲಿಂಕ್ ಒತ್ತಿ.https://satwadhara.news/category/local-news-uttara-kannada/