ಹೊನ್ನಾವರ : ಹೊನ್ನಾವರ ತಾಲೂಕಿನವರಿಗೆ ಚಿರತೆ ಭಯ ಮತ್ತೆ ಮತ್ತೆ ಕಾಡತೊಡಗಿದೆ. ಬಾವಿಯಲ್ಲಿ ಚಿರತೆ ಬಿದ್ದ ಘಟನೆ ಹಸಿಯಾಗಿ ಇರುವಾಗಲೇ ನಿನ್ನೆ ದಿನ ಚಿರತೆ ಬೈಕ್ ಸವಾರನ ಮೇಲೆ ದಾಳಿ ಮಾಡಿ ಭಯ ಹುಟ್ಟಿಸಿತ್ತು, ಇದೀಗ ಇದರ ಬೆನ್ನಲ್ಲೆ ಚಿರತೆ, ಜಾನುವಾರುಗಳ‌ ಮೇಲೆ ದಾಳಿ ಮಾಡಿದೆ. ಇದು ಜನರಲ್ಲಿ ಇನ್ನಷ್ಟು ಭಯದ ವಾತಾವರಣ ಮೂಡಿಸಿದೆ.

RELATED ARTICLES  ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ಪಾಲಕರ ಸಭೆ ಮತ್ತು ಆಪ್ತ ಸಲಹೆ ಕಾರ್ಯಕ್ರಮ.

ಮೇಯಲು ಹೋದ ಜಾನುವಾರಿನ ಮೇಲೆ ದಾಳಿ ನಡೆಸಿದ ಘಟನೆ ತಾಲೂಕಿನ ಸಾಲ್ಕೋಡ ಭಾಗದಿಂದ ವರದಿಯಾಗಿದೆ. ಚಿರತೆ ಜಾನುವಾರಿನ ಮೇಲೆ‌ ಎರಗಿದೆ. ಆದರೆ ಜಾನುವಾರು ಹೇಗೋ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಬಂದಿದೆ ಎನ್ನಲಾಗಿದೆ.

RELATED ARTICLES  ಕೊಟ್ಟ ಮಾತು ಉಳಿಸಿಕೊಳ್ಳಲು ಆಗಲಿಲ್ಲವೆಂದು ಜನತೆಯ ಕ್ಷಮೆ ಕೇಳಿದ ಆರ್.ವಿ.ದೇಶಪಾಂಡೆ.

ಕೊಟ್ಟಿಗೆಗೆ ಬಂದ ದನವನ್ನು ಮಾಲೀಕರು ಗಮನಿಸಿದಾಗ ಚಿರತೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಸಾಲ್ಕೋಡಿನ ಸುತ್ತಮುತ್ತ ಇದೀಗ ಎಲ್ಲಡೆ ಚಿರತೆ ದಾಳಿ ಭಯ ಶುರುವಾಗಿದೆ. ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು, ವಾಹನಸವಾರರು ಓಡಾಡಲು ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ.