ಕಾರವಾರ : ಉತ್ತರ ಕನ್ನಡಕ್ಕೆ ಬರುವ ಪ್ರವಾಸಿಗರು ಅದೆಷ್ಟೇ ಮುನ್ನೆಚ್ಚರಿಕೆ ಹಾಗೂ ಸೂಚನೆಗಳನ್ನು ನೀಡಿದರೂ ಸಮುದ್ರಕ್ಕೆ ಇಳಿದು, ಒಂದಲ್ಲ ಒಂದು ಅವಾಂತರವನ್ನು ಸೃಷ್ಟಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಗೋಕರ್ಣಕ್ಕೆ ಆಗಮಿಸಿದ ಚಲನಚಿತ್ರ ನಟನವರು ಇಂತಹ ಒಂದು ಅಪಾಯಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ಈಜಲು ಹೋಗಿ ಸಮುದ್ರದಲ್ಲಿ ಮುಳುಗಿದ್ದ ಚಲನ ಚಿತ್ರ ನಟನನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.

RELATED ARTICLES  ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ನಿರ್ಮಲಾ ಹೆಗಡೆ ಚಿನ್ನದ ಪದಕದ ಗರಿ

ಹೈದ್ರಬಾದ್ ಮೂಲದ ಚಿತ್ರನಟ ಅಖಿಲ್ ರಾಜ್ (26) ರಕ್ಷೆಣೆಗೊಳಗಾದವರಾಗಿದ್ದು , ಇವರು ಗೋಕರ್ಣದ ಸಮುದ್ರದಲ್ಲಿ ಈಜಲು ಹೋದಾಗ ಸುಳಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ. ಗೋಕರ್ಣ ಅಡ್ವೆಂಚರ್ ಸಂಸ್ಥೆಯ ಸಿಬ್ಬಂದಿ ಹಾಗೂ ಲೈಪ್ ಗಾರ್ಡ ಸಿಬ್ಬಂದಿ ಈತ ಸಮುದ್ರದ ಸುಳಿಯಲ್ಲಿ ಸಿಲುಕೊರುವುದನ್ನು ಕಂಡು ಜಟ್ ಸ್ಕೀ ವಾಟರ್ ಬೈಕ್ ಮೂಲಕ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

RELATED ARTICLES  ಜಿಲ್ಲೆಯಲ್ಲಿ ಇಂದು 198 ಜನರಿಗೆ ಕೊರೋನಾ ಪಾಸಿಟಿವ್ : ಮೂರು ಸಾವು