ಹೊನ್ನಾವರ: ರಾಜ್ಯದ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ತಾಲೂಕಿನ ಇಕೋ ಬೀಚ್​ಗೆ​ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದ್ದು, 3ನೇ ಬಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಉತ್ತರ ಕನ್ನಡ ಜಿಲ್ಲಾಡಳಿತದಿಂದ ಉತ್ತಮ ನಿರ್ವಹಣೆ ಮಾಡಲಾಗಿದೆ. ತೌಕ್ತೆ ಚಂಡಮಾರುತ, ಪ್ರವಾಹದಿಂದ ಬೀಚ್​ ಸೇರಿದಂತೆ ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆ ವಸ್ತುಗಳು ಹಾಳಾಗಿತ್ತು. ದುರಸ್ತಿ ನಡೆಸಿ ಕಡಲ ತೀರವನ್ನು ಜಿಲ್ಲಾಡಳಿತ ಸುಂದರವಾಗಿಸಿದ್ದು, ಈಗ ಮತ್ತೆ ಕೇಂದ್ರ ತಂಡದಿಂದ ಇಕೋ ಬೀಚ್ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದ್ದು, ಈ ಬಾರಿಯೂ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕರಾವಳಿ ಜಿಲ್ಲೆ ಉತ್ತರಕನ್ನಡದ ಹೊನ್ನಾವರ ತಾಲ್ಲೂಕಿನ ಕಾಸರಕೋಡ್‌ನಲ್ಲಿ ಜಿಲ್ಲಾಡಳಿತವು ಇಕೋ ಬೀಚ್​​ನ್ನು ನಿರ್ಮಾಣ ಮಾಡಿತ್ತು. ಪರಿಸರ ಸ್ನೇಹಿ ಜೊತೆಗೆ ಪ್ರವಾಸಿಗರುನ್ನು ಸೆಳೆಯಲು ಇಕೋ ಬೀಚ್ ನಿರ್ಮಾಣ ಮಾಡಲಾಗಿದೆ.

RELATED ARTICLES  ತಾಯಿಯನ್ನೇ ಭೀಕರವಾಗಿ ಕೊಂದ ಮಗ : ಕುಮಟಾದಲ್ಲಿ ಬೆಚ್ಚಿ ಬೀಳೋ ಘಟನೆ.

ಡೆನ್ಮಾರ್ಕ್‌ನ ಕೋಪನ್‌ ಹೆಗನ್‌ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಜಾಗತಿಕ ಮಟ್ಟದಲ್ಲಿ ಈ ಮನ್ನಣೆಯನ್ನು ನೀಡುತ್ತದೆ. ಈ ಹೆಗ್ಗಳಿಕೆಯನ್ನು ಪಡೆದುಕೊಳ್ಳಲು ಸ್ಥಳೀಯ ಆಡಳಿತವು ಕಡಲತೀರದ ಸ್ವಚ್ಛತೆ, ಅಲ್ಲಿನ ನೀರಿನ ಗುಣಮಟ್ಟ, ಪರಿಸರ ಸ್ನೇಹಿ ನಿರ್ಮಾಣಗಳು 33 ವಿಭಾಗಗಳಲ್ಲಿ ನಿಗದಿ ಮಾಡಲಾದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಇದನ್ನೂ ಓದಿ – ಗೋಕರ್ಣದಲ್ಲಿ ಸಮುದ್ರಪಾಲಾಗುತ್ತಿದ್ದ ಚಲನಚಿತ್ರ ನಟನ ರಕ್ಷಣೆ.

ಕಾಸರಕೋಡಿನ ಕಡಲತೀರದ ‘ಬ್ಲೂ ಫ್ಕ್ಯಾಗ್’ ನ್ನು 2020ರ ಡಿ. 28ರಂದು ಉದ್ಘಾಟಿಸಲಾಗಿತ್ತು. ಇದೇ ರೀತಿ, ಉಡುಪಿ ಜಿಲ್ಲೆಯ ಪಡುಬಿದ್ರಿ ಕಡಲತೀರಕ್ಕೂ ಮನ್ನಣೆ ನೀಡಲಾಗಿತ್ತು. ಅಲ್ಲಿನ ಕಡಲತೀರ ಕೂಡ ಈ ವರ್ಷವೂ ‘ಬ್ಲೂ ಫ್ಲ್ಯಾಗ್’ ಪಡೆದುಕೊಂಡಿದೆ.

RELATED ARTICLES  ಎ.ಟಿ.ಎಂ ಒಡೆಯಲು ನೋಡಿದ ಕಳ್ಳರು : ಸಾರ್ವಜನಿಕರನ್ನು ಕಂಡು ಓಡಿದ ಕಧೀಮರು.

ವಿಶೇಷ ಅಂದರೆ ಹೊನ್ನಾವರದ ಇಕೋ ಬೀಚ್ ಪ್ರವಾಸಿಗರು ಭೇಟಿ ನೀಡಲು ಬಹಳ ಅನುಕೂಲರವಾದ ವಾತಾವರಣ ನಿರ್ಮಾಣ ಮಾಡಲಾಗಿದೆ. ಮಕ್ಕಳಿಗೆ ಆಟದ ವಸ್ತುಗಳು, ಸುಂದರ ವಿಹಂಗಮ ನೋಟ ಎಲ್ಲವೂ ಅದ್ಬುತವಾಗಿದೆ ಹೀಗಾಗಿ ಈ ಎಲ್ಲ ಮಾನದಂಡಗಳ ಆದಾರದ ಮೇಲೆ ಮತ್ತೆ ಬೀಚ್‌ಗೆ ಬ್ಲೂ ಪ್ಲ್ಯಾಗ್ ಮಾನ್ಯತೆ ಸಿಕ್ಕಿದೆ.

ಉತ್ತರಕನ್ನಡದ ಎಲ್ಲಾ ಸುದ್ದಿಗಳನ್ನೂ ಓದಲು ಈ ಲಿಂಕ್ ಒತ್ತಿ.https://satwadhara.news/category/local-news-uttara-kannada/