ದಾಂಡೇಲಿ : ಪೀಠೋಪಕರಣ ತಯಾರಿಕಾ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮಳಿಗೆಯಲ್ಲಿದ್ದ ಕೋಟ್ಯಾಂತರ ರೂ. ಪೀಠೋಪಕರಣಗಳು ಸುಟ್ಟು ಭಸ್ಮವಾದ ಘಟನೆ ನಗರದ ಅಂಬೇವಾಡಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಪೀಠೋಪಕರಣ ತಯಾರಿಕಾ ಮಳಿಗೆಯು ಉದಯ ನಾಯ್ಕ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ.

RELATED ARTICLES  ರಂಗಭೂಮಿ ಜನ ಸಾಮಾನ್ಯರ ಕನ್ನಡಿ : ಅರವಿಂದ ಕರ್ಕಿಕೋಡಿ.

ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಬೆಂಕಿ ಹೊತ್ತಿಕೊಂಡ ರಭಸಕ್ಕೆ ಪಕ್ಕದ ಮಳಿಗೆಗಳಿಗೂ ತಾಗಿದ್ದು ಸಾಕಷ್ಟು ಹಾನಿ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ಆರಿಸಿದ್ದು ಹೆಚ್ಚಿನ ಅನಾಹುತ ಆಗದಂತೆ ತಡೆದಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ನಿಮ್ಮ ಕನಸಿನ ಮನೆಯ ಸಾಕಾರಕ್ಕೆ ಜೊತೆಯಾಗಲಿದೆ "Dream Home"