ಬೆಂಗಳೂರು: ಮನೆಯ ಸಾಕು ನಾಯಿಗೆ ವಿಷವುಣಿಸಿ ಕಳ್ಳತನ ಮಾಡಿರುವ ದರೋಡೆಕೋರರು ಪರಾರಿಯಾಗುವ ವೇಳೆ ಭಯದಲ್ಲಿ ತಮ್ಮ ಅತ್ಯಮೂಲ್ಯವಾದ ಮೊಬೈಲ್’ನ್ನೇ ಮನೆಯಲ್ಲಿ ಬಿಟ್ಟು ಹೋಗಿರುವ ಘಟನೆ ನೆಲಮಂಗಲದಲ್ಲು ಶುಕ್ರವಾರ ನಡೆದಿದೆ.

ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಶಾಂತಿನಗರದ ಸ್ಟೀಲ್ ಸಿಮೆಂಟ್ ಉದ್ಯಮಿಯಾಗಿರುವ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಗೆ ಬಂದಿರುವ ಕಳ್ಳರು ಮೊದಲು ಶ್ರೀನಿವಾಸ್ ಅವರ ಮನೆಯಲ್ಲಿದ್ದ ಸಾಕು ನಾಯಿಗೆ ವಿಷ ಹಾಕಿದ್ದಾರೆ, ಬಳಿಕ ಮನೆ ನುಗ್ಗಿರುವ ಕಳ್ಳರು, ಮನೆಯಲ್ಲಿದ್ದ ರೂ.3 ಲಕ್ಷ ಮತ್ತು 400 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗುವ ವೇಳೆ ಭಯದಲ್ಲಿ ಮೊಬೈಲ್ ವೊಂದನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ.

RELATED ARTICLES  ಇಂದಿನ ದಿನ ಯಾರಿಗೆ ಹೇಗಿದೆ?ಇಂದಿನ ದಿನಾಂಕ 02/02/2019ರ ದಿನ ಭವಿಷ್ಯ ಇಲ್ಲಿದೆ.

ಶ್ರೀನಿವಾಸ್ ಅವರ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ಶ್ರೀನಿವಾಸ್ ಅವರು ಮಾಹಿತಿ ನೀಡಿದ್ದಾರೆ. ಪರಿಶೀಲನೆ ವೇಳೆ ಪೊಲೀಸರಿಗೆ ಕಳ್ಳರ ಮೊಬೈಲ್ ಫೋನ್ ವೊಂದು ದೊರಕಿದೆ. ಕಳ್ಳರ ಮೊಬೈಲ್ ನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೀಗ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ರಾಸಾಯನಿಕ ಸೇವನೆಯಿಂದ ಅಸ್ವಸ್ಥಗೊಂಡಿದ್ದ ನಾಯಿ ಇದೀಗ ಚೇತರಿಸಿಕೊಂಡಿದೆ ಎಂದು ತಿಳಿದುಬಂದಿದೆ.

RELATED ARTICLES  ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶುಭ ಕೋರಿದ ಪ್ರಧಾನಿ ಮೋದಿ.