ಮುಂಡಗೋಡ: ಪೆಟ್ರೋಲ್ ಪಂಪ್ ಮುಂದೆ ಬೈಕ್ ಕಳುವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಾಲೂಕಿನ ಲಕ್ಕೋಳಿ ಗ್ರಾಮದ ಕೃಷ್ಣ ಫಕ್ಕಿರಪ್ಪ ಸಿಂಗನಳ್ಳಿಯವರಿಗೆ ಸಂಬಂಧಿಸಿದ್ದ ಬೈಕ್ ಕಳುವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು,ಬಡ್ಡಿಗೇರಿ ಗ್ರಾಮದ ವಿಠ್ಠು ಬೀರು ಎಡಗೆಯನ್ನು ಬಂಧಿಸಿದ್ದಾರೆ. ಆರೋಪಿಯು ಬೈಕ್ ಕಳ್ಳತನ ಮಾಡಿಕೊಂಡು ಗೋವಾ ರಾಜ್ಯದ ಗಡಿ ಭಾಗದಲ್ಲಿ ಕಡಿಮೆ ಬೆಲೆಗೆ ಬೈಕ್‌ನ್ನು ಮಾರಾಟ ಮಾಡಿ ಬರುತ್ತಿದ್ದನು
ಎನ್ನಲಾಗಿದೆ.

RELATED ARTICLES  ಉತ್ತರ ಕನ್ನಡ ಫೈರ್ ಬ್ಯಾಂಡ್ ಅನಂತ್ ಕುಮಾರ್ ಹೆಗಡೆ ಕಾರಿನ‌ ಮೇಲೆ ಚಪ್ಪಲಿ ಎಸೆತ: ಕಿಡಿಗೇಡಿಗಳಿಂದ ದಾಂಧಲೆ!

ಪಿಐ ಎಸ್.ಎಸ್.ಸಿಮಾನಿ ಮಾರ್ಗದರ್ಶನದಲ್ಲಿ ಪಿಎಸೈಗಳಾದ ಬಸವರಾಜ ಮಬನೂರ, ನಿಂಗಪ್ಪ ಜಕ್ಕಣ್ಣವರ, ಪ್ರೊಬೆಶನರಿ ಪಿಎಸೈ ಮಹೇಶ ಮಾಳಿ ನೇತೃತ್ವದ ತಂಡದಲ್ಲಿ ಸಿಬ್ಬಂದಿ ಮಹ್ಮದ ಸಲೀಂ, ಕೋಟೇಶ ನಾಗರವಳ್ಳಿ, ಬಸವರಾಜ ಲಮಾಣಿ, ಶಂಭುಲಿಂಗ ಜಾವೂರು, ಅರುಣ ಬಾಗೇವಾಡಿ ನಾಗರಾಜ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮುಂಡಗೋಡ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ಸಾಧನೆ.