ಕಾರವಾರ : ಕಳೆದ ಕಾಲದಿಂದ ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮುಲೈ ಮುಹಿಲನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉತ್ತರಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ ನಿಯೋಜನೆಯಾಗಿದೆ. ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಹಲವು ಅನುಭವಗಳೊಂದಿಗೆ ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಮುಲ್ಲೈ ಮುಗಿಲನ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದ್ದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಹರೀಶ್ ಕುಮಾರ್ ನಂತರ 2021 ಫೆಬ್ರವರಿ 7 ರಂದು ಉತ್ತರ ಕನ್ನಡಕ್ಕೆ ಡಿಸಿಯಾಗಿ ಆಗಮಿಸಿದ್ದ ಅವರು ಸರಳ ವ್ಯಕ್ತಿತ್ವ ಹಾಗೂ ಉತ್ತಮ ಆಡಳಿತಗಾರರಾಗಿ ಜನಾನುರಾಗಿಯಾಗಿ ಹೆಸರು ಮಾಡಿದ್ದರು. ಇವರ ಜಾಗಕ್ಕೆ ಹಟ್ಟಿ ಗೋಲ್ಡ್‌ಮೈನ್ಸ್ ಕಂಪನಿಯ ನಿರ್ದೇಶಕರಾದ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ನಿಯೋಜಿಸಲಾಗಿದೆ.

ಪ್ರವಾಹ ಸಂದರ್ಭದಲ್ಲಿ ಹಾಗೂ ಕೋವಿಡ್ ಸಂದರ್ಭದಲ್ಲಿ ಮುಲೈ ಮುಗಿಲನ್ ರವರ ಕಾರ್ಯ ವನ್ನು ಇಡೀ ಜಿಲ್ಲೆಯ ಜನ ನೆನಪಿಟ್ಟುಕೊಳ್ಳುವಂತೆ ಮಾಡಿದ್ದು ಅವರ ದಿಡೀರ್ ವರ್ಗಾವಣೆ ಜಿಲ್ಲೆಯ ಜನರಿಗೆ ಬೇಸರ ಮೂಡಿಸುವಂತಿದೆ.

RELATED ARTICLES  ಕಾರವಾರದಲ್ಲಿ 'ನೀನಾಸಂ ನಾಟಕೋತ್ಸವ'

ರಾಜ್ಯ ಸರ್ಕಾರ 21 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 5 ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಲಾಗಿದ್ದು, 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಏನೆಲ್ಲಾ ಬದಲಾವಣೆ ವಿವರ ಇಲ್ಲಿದೆ.

ಕಪಿಲ್ ಮೋಹನ್- ಎಸಿಎಸ್, ಪ್ರವಾಸೋದ್ಯಮ ಇಲಾಖೆ, ಅನಿಲ್ ಕುಮಾರ್ ಟಿ.ಕೆ.- ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ( ಹೆಚ್ಚುವರಿ ಹೊಣೆ) ಅನಿಲ್ ಕುಮಾರ್ ಹಾಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಡಾ. ಪ್ರಸಾದ್ ಎನ್.ವಿ.- ಕಾರ್ಯದರ್ಶಿ, ಕಾರ್ಮಿಕ ಇಲಾಖೆ (ಹೆಚ್ಚುವರಿ ಹೊಣೆ) ಪ್ರಸಾದ್​ ಹಾಲಿ ಸಾರಿಗೆ ಇಲಾಖೆ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ – ಗೋಖಲೆ ಸೆಂಟಿನರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ, ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖ ಪ್ರೊ.ವಿ.ಆರ್. ವೆರ್ಣೇಕರ್ ಹೃದಯಾಘಾತದಿಂದ ವಿಧಿವಶ.

ಜಯರಾಂ ಎನ್. – ಕಾರ್ಯದರ್ಶಿ, ಕಂದಾಯ ಇಲಾಖೆ (ಹೆಚ್ಚುವರಿ ಹೊಣೆ) ಜಯರಾಂ ಹಾಲಿ ಜಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷರಾಗಿದ್ದಾರೆ. ಡಾ‌. ಕುಮಾರ- ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ( ಹೆಚ್ಚುವರಿ ಹೊಣೆ) ಡಾ‌. ಕುಮಾರ ಹಾಲಿ ದಕ್ಷಿಣ ಕನ್ನಡ ಜಿ.ಪಂ. ಸಿಇಓ ಆಗಿದ್ದಾರೆ. ಡಾ. ಬಗಾದಿ ಗೌತಮ್-ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಶ್ರೀವಿದ್ಯಾ ಪಿ.ಐ – ಸಿಇಓ,ಇ-ಆಡಳಿತ ಕೇಂದ್ರ ಬೆಂಗಳೂರು, ರಮೇಶ್ ಡಿ.ಎಸ್- ಜಿಲ್ಲಾಧಿಕಾರಿ, ಚಾಮರಾಜನಗರ, ಡಾ. ಗೋಪಾಲಕೃಷ್ಣ ಹೆಚ್.ಎನ್- ಜಿಲ್ಲಾಧಿಕಾರಿ, ಮಂಡ್ಯ ಜಾನಕಿ ಕೆ.ಎಂ- ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ, ಡಾ. ರಾಜೇಂದ್ರ ಕೆ.ವಿ- ಜಿಲ್ಲಾಧಿಕಾರಿ, ಮೈಸೂರು, ಅಶ್ವಥಿ ಎಸ್- ಆಯುಕ್ತೆ, ಪಶು ಸಂಗೋಪನಾ ಇಲಾಖೆ
ಮುಲ್ಲೈ ಮುಹಿಲನ್ – ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರಭುಲಿಂಗ್ ಕವಳಿಕಟ್ಟಿ-ಜಿಲ್ಲಾಧಿಕಾರಿ, ಉತ್ತರ ಕನ್ನಡ, ಎಂ.ಎಸ್. ದಿವಾಕರ-ಜಿ.ಪಂ. ಸಿಇಓ, ಚಿತ್ರದುರ್ಗ, ದಿವ್ಯಪ್ರಭು ಜಿ.ಆರ್.ಜೆ.- ಜಿಲ್ಲಾಧಿಕಾರಿ, ಚಿತ್ರದುರ್ಗ ನಳಿನಿ ಅತುಲ್- ಅಧ್ಯಕ್ಷ, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ರಘುನಂದನ್ ಮೂರ್ತಿ- ಜಿಲ್ಲಾಧಿಕಾರಿ, ಹಾವೇರಿ, ಭನ್ವರ್ ಸಿಂಗ್ ಮೀನಾ- ನಿಯಂತ್ರಕ, ಕೆಪಿಎಸ್ ಸಿ ಪ್ರಕಾಶ್ ಜಿ.ಟಿ.- ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಆಕಾಶ್ ಎಸ್.- ಸಿಇಓ, ಜಿ.ಪಂ. ಕೊಡಗು

RELATED ARTICLES  ವಿದ್ಯುತ್ ವಾಟರ್ ಹೀಟರ್ ತೆಗೆಯುವಾಗ ಅವಘಡ : ವೃದ್ಧೆ ಸಾವು