ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ ನ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ ಕಾರವಾರ ನಗರದ ಮೂರು ಕಡೆ ಇಳಿಯಲು
ಪ್ರಯತ್ನಿಸಿದ್ದು, ಇದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಕಾರವಾರ ನಗರದ ಮಾಲಾದೇವಿ ಮೈದಾನ, ಡಿಸಿ ಕಚೇರಿ ಎದುರಿಗಿನ ಫೈ ಓವರ್ ಮೇಲೆ, ಟ್ಯಾಗೋರ್ ಕಡಲತೀರದಲ್ಲಿ
ಹೆಲಿಕಾಪ್ಟರ್ ಇಳಿಯಲು ಪ್ರಯತ್ನಿಸಿ ತೆರಳಿದೆ. ಹೆಲಿಕಾಪ್ಟರ್ ತೀರಾ ಕೆಳಮಟ್ಟಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಆತಂಕಿತರಾದರು. ಏನು ನಡೆಯುತ್ತಿದೆ ಎನ್ನುವುದು ತಿಳಿಯದೆ ಗಾಬರಿಯಾದರು. ರಸ್ತೆ, ಕಡಲತೀರದಲ್ಲಿ ನಿಂತವರೆಲ್ಲ ಮೊಬೈಲ್ ಹಿಡಿದು ಫೋಟೋ, ವಿಡಿಯೋ ಮಾಡಿಕೊಂಡರು ಎನ್ನಲಾಗಿದೆ.

RELATED ARTICLES  ಅಸಹಜ ರೀತಿಯಲ್ಲಿ ಹೆಣ್ಣು ಚಿರತೆ ಸಾವು

ಆದರೆ ಇದರ ಬಗ್ಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳನ್ನ ಸಂಪರ್ಕಿಸಿದಾಗ, ಅವರು ಇದೊಂದು ಟ್ರೈಯಲ್ ಅಷ್ಟೇ. ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಅನ್ನು ಎಲ್ಲೆಲ್ಲಿ ಸುರಕ್ಷಿತವಾಗಿ ಇಳಿಸಬಹುದು ಎಂಬ ಬಗ್ಗೆ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದೇವೆ. ಅಂಕೋಲಾದ ಹಟ್ಟಿಕೇರಿ, ಕಾರವಾರದ ನಗರ ಭಾಗದಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು
ತಿಳಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಬಿಡುಗಡೆಯಾಗಲಿದೆ ಹೊಸ 100ರೂ ನೋಟು! ಅದರ ವಿನ್ಯಾಸ ಹೇಗಿರಲಿದೆ ಗೊತ್ತಾ?