ಭಟ್ಕಳ : ಆರೋಪಿಯನ್ನು ಪೊಲೀಸರು ಕೋರ್ಟಿಗೆ ಹಾಜರುಪಡಿಸಿ ಬಳಿಕ ಜೈಲಿಗೆ ಕೊಂಡೊಯ್ಯುತ್ತಿದ್ದ ವೇಳೆ ಜೈಲಿನ ದ್ವಾರದ ಎದುರು ಪೊಲೀಸರಿಗೆ ಹಲ್ಲೆಗೈದು ಆರೋಪಿ ಪರಾರಿಯಾದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಮೊಬೈಲ್ ಅಂಗಡಿ ಕಳ್ಳತನಗೈದ ಆರೋಪಿ ಭಟ್ಕಳ ನಿವಾಸಿ ಮೊಹಮ್ಮದ್ ರಾಹೀಕ್ ನನ್ನು ಕುಂದಾಪುರ ಪೊಲೀಸರು ಕೋರ್ಟಿಗೆ ಹಾಜರುಪಡಿಸಿ ಬಳಿಕ ಜೈಲಿಗೆ ಕೊಂಡೊಯ್ಯುತ್ತಿದ್ದ ವೇಳೆ ಈತ ತಪ್ಪಿಸಿಕೊಂಡಿದ್ದಾನೆ. ಈತ ಕೆಲ ತಿಂಗಳ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಯ ಬೀಜಾಡಿ ಎಂಬಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ.

RELATED ARTICLES  ಗ್ರಂಥಸ್ಥ ವ್ಯಕ್ತಿತ್ವದ ಮುಲ್ಲಾ ಇಲಾಖೆಗೆ ಮಾದರಿ “ಎದೆಯದನಿ” ಮುಲ್ಲಾಭಿನಂದನದ ಲೋಕಾರ್ಪಣದಲ್ಲಿ ಡಿಡಿಪಿಐ ಅಭಿಮತ

ಇದನ್ನೂ ಓದಿ – ಬೈಕ್ ಕಳವು ಮಾಡಿದ್ದ ಆರೋಪಿ ಅರೆಸ್ಟ್..!

ಈತನನ್ನು ಅಕ್ಟೋಬರ್ 19ರಂದು ಕುಂದಾಪುರ ಪೊಲೀಸರು ಬಂಧಿಸಿ, ಖಾಸಗಿ ವಾಹನದಲ್ಲಿ ಭದ್ರತೆಯಲ್ಲಿ ಕುಂದಾಪುರ ಕೋರ್ಟಿಗೆ ಹಾಜರುಪಡಿಸಿದ್ದರು. ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹವಾದ ಹಿರಿಯಡ್ಕ ಜೈಲಿಗೆ ಒಪ್ಪಿಸುವಂತೆ ಆದೇಶಿಸಿತ್ತು. ಅದರಂತೆ ಪೊಲೀಸರು ಕುಂದಾಪುರದಿoದ ಹೊರಟು ಜಿಲ್ಲಾಕಾರಾಗೃಹದ ಸಮೀಪ ಬರುತ್ತಿದ್ದಂತೆ ಆರೋಪಿ ಭದ್ರತೆಯಲ್ಲಿದ್ದ ಸಿಬ್ಬಂದಿಯವರನ್ನು ತಳ್ಳಿ, ತಪ್ಪಿಸಿಕೊಂಡು ಓಡಿಹೋಗಿದ್ದಾನೆ ಎಂದು ದೂರು ದಾಖಲಾಗಿದೆ.

RELATED ARTICLES  ಕಾಲೇಜಿನಲ್ಲಿ ಗಮನ ಸೆಳೆದ ಆಹಾರಮೇಳ