ಕೆಕ್ಕಾರು: ಧರ್ಮ ಅಧರ್ಮಗಳ ಸಂಗ್ರಾಮ ಅದು ಇಂದಿನದಲ್ಲ,ಹಿಂದಿನಿಂದಲೂ ಇದೆ. ಅದು ನಿರಂತರ. ಅಮಲು ತಲೆಗೆ ಹತ್ತಿದಾಗ ದುಷ್ಟರು ರೂಪುಗೊಳ್ಳುತ್ತಾರೆ. ಅದು ಅಧಿಕಾರದ ಅಮಲಿರಬಹುದು, ಸಂಪತ್ತಿನ ಅಮಲಿರಬಹುದು, ಆದರೆ ಅಮಲು ಇಳಿದಾಗ ಪ್ರತಿಯೊಬ್ಬರೂ ಭೂಮಿಗೆ ಬರಲೇಬೇಕು. ಈ ಸತ್ಯ ಅರಿವಿಗೆ ಬರುವಾಗ ಅವರು ಒಂಟಿಯಾಗುತ್ತಾರೆ. ತಮ್ಮ ಸ್ವಾರ್ಥ್ಕಕಾಗಿ ತಮ್ಮವರನ್ನೆಲ್ಲಾ ಬಲಿ ಕೊಟ್ಟಿರುತ್ತಾರೆ. ಹಾಲು ಕೊಡುವವರು ರಕ್ತ ಕುಡಿಯಲು ಬರುವಂತೆ ಮಾಡಬಾರದು ಎಂದು ಮಹಾಕಾಳಿಯ ಕಥೆಯೊಂದಿಗೆ ರಾಘವೇಶ್ವರ ಶ್ರೀ ಗಳು ವಿವರಿಸಿದರು. ಅವರು ಕೆಕ್ಕಾರಿನ ಶ್ರೀ ರಘೂತ್ತಮ ಮಠದಲ್ಲಿ ನಡೆದ ನವರಾತ್ರಿ ಮಹೋತ್ಸವದ “ಮಂಗಲ ಸಭೆ” ಯ ಸಾನಿಧ್ಯವಹಿಸಿ ಮಾತನಾಡಿ “ನಮ್ಮ ಹೃದಯದಲ್ಲಿ ಭಗವಂತ ಬೆಳಗಿದಾಗ ಅದು ಭಕ್ತಿ, ಭಗವಂತನ ಹೃದಯದಲ್ಲಿ ನಾವು ಬೆಳಗಿದಾಗ ಅದು ಮುಕ್ತಿ” ಶೃದ್ಧಾ ಭಕ್ತಿ ಯಾರಲ್ಲಿ ಇರುತ್ತದೋ ಅವರು ಮುಕ್ತಿಯೆಡೆಗೆ ಸಾಗಲು ಸಾಧ್ಯ ಎಂದರು.

ಕೆಕ್ಕಾರಿನ ಶ್ರೀ ರಘೂತ್ತಮ ಮಠದಲ್ಲಿ ಕಳೆದ 42 ವರ್ಷ ಗಳಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಗೋವಿಂದ ಹೆಗಡೆಯವರಿಗೆ 1 ಲಕ್ಷ ರೂಪಾಯಿಗಳ ಸುವರ್ಣ ಮಂತ್ರಾಕ್ಷತೆ ನೀಡಿ ಹರಸಿದ ಶ್ರೀಗಳು ಅವರು ಕೇವಲ ವ್ಯವಸ್ಥಾಪಕರಾಗಿರದೇ ನಿಜ ಅರ್ಥ ದಲ್ಲಿ “ಶ್ರೀ ಮಠದ ಯಜಮಾನ”ರಾಗಿದ್ದರು.ಅವರ ನಿಸ್ವಾರ್ಥ ಸೇವೆ ಅದು ಅನುಪಮವಾದದ್ದು, ಅವರ ಮುಂದಿನ ಜೀವನದಲ್ಲೂ ಶ್ರೀ ಮಠ ಸದಾ ಅವರ ಜೊತೆಗೆ ಇರುತ್ತದೆ ಎಂದರು.

ಹೆಗಡೆಯ ವೇದ ಸಂಸ್ಕೃತ ಅಕಾಡೆಮಿಯ ನಿರ್ದೇಶಕರೂ, ಕುಮಟಾ ಮಂಡಲದ ವಿದ್ಯಾರ್ಥಿ ವಾಹಿನಿಯ ಪ್ರಧಾನರೂ ಆದ ಜ್ಯೋತಿಷ ಶಾಸ್ತ್ರ ಧರ್ಮ ಶಾಸ್ತ್ರ ವಿದ್ವಾನ್ ಡಾ// ಗೋಪಾಲಕೃಷ್ಣ ಹೆಗಡೆ ಸಂಪಾದಿಸಿ ಪ್ರಕಾಶಿಸುತ್ತಿರುವ ” ಶ್ರೀ ದುರ್ಗಾ ಸಪ್ತಶತೀ” ಕೃತಿಯನ್ನು ಶ್ರೀ ಗಳು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಆಂಜನೇಯನಿಗೆ ಕಣಜ ಸೇವೆ ಸಮರ್ಪಿಸಿ ಉಳಿದ 46,392 ರೂಪಾಯಿಗಳನ್ನು ” ನಾವಿದ್ದೇವೆ ಬಳಗ ” ದವರು ಆಂಜನೇಯ ದೇವಸ್ಥಾನದ ಅಭಿವೃದ್ಧಿಗೆ ಸಮರ್ಪಿಸಿದರು. ಕೆಕ್ಕಾರು ಮಠದ ಶ್ರೀ ರಾಮದೇವರ ಪೂಜೆಗಾಗಿ ಬೆಳ್ಳಿಯ ಹರಿವಾಣ ಹಾಗೂ ಪಂಚಾಮೃತ ಪರಿಕರಗಳನ್ನು ಕಾರ್ಯಕರ್ತರು ಶ್ರೀ ಗಳಿಗೆ ಸಮರ್ಪಿಸಿದರು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕುಮಟಾದ ದಯಾನಿಲಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಾದ ಸಿರಿಲ್ ಲೋಪೀಸ್ ರವರೊಂದಿಗೆ ತಮ್ಮ ರಾಷ್ಟ್ರಮಟ್ಟದ ಸಾಧನೆ ಗಾಗಿ ಶ್ರೀ ಗಳಿಂದ ಅನುಗ್ರಹಿತರಾದರು.

RELATED ARTICLES  ಸಮುದ್ರದಲ್ಲಿ ಮುಳುಗಿ ಕಾಣೆಯಾದ ಬಾಬು ಹರಿಕಾಂತ ಕುಟುಂಬಕ್ಕೆ ವಯಕ್ತಿಕ 25,000/- ನೀಡಿ : ಕಷ್ಟಗಳಿ ಸದಾ ಸ್ಪಂದಿಸುತ್ತೇನೆ ಎಂದ ಶಾಸಕ ದಿನಕರ ಶೆಟ್ಟಿ.

ಕೆಕ್ಕಾರು ಮಠದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಶಿಲಾನ್ಯಾಸವನ್ನು ರಾಘವೇಶ್ವರ ಶ್ರೀ ಗಳು ನೆರವೇರಿಸಿ ದೇವಸ್ಥಾನದ ಲೋಕಾರ್ಪಣೆಗೆ 2018 ಏಪ್ರಿಲ್‌ 30 ರ ದಿನಾಂಕವನ್ನು ಘೋಷಿಸಿದರು. ದೇವಸ್ಥಾನದ ನಿರ್ಮಾಣಕ್ಕೆ ಭಕ್ತರು ಪರಸ್ಪರ ಕೈ ಜೋಡಿಸಿ ಶೀಘ್ರವಾಗಿ ಕಾರ್ಯ ಪೂರೈಸುವಂತೆ ಅವರು ತಿಳಿಸಿದರು.

RELATED ARTICLES  ನೇಣಿಗೆ ಶರಣಾದ ಅಂಕೋಲಾದ ಯುವಕ

ಕೆಕ್ಕಾರು ಮಠದ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಎಂ.ಕೆ.ಹೆಗಡೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ವಿ.ವಿ.ಭಟ್ಟ ದಂಪತಿಗಳು ಸಭಾಪೂಜೆಗೈದರು. ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರೂಪಿಸಿದರು. ನಂತರದಲ್ಲಿ ಶ್ರೀಗಳವರಿಂದ ಶ್ರೀದುರ್ಗಾಸಪ್ತಶತೀ ಪ್ರವಚನ ಹಾಗೂ ಪ್ರಸಿದ್ಧ ಕಲಾವಿದರಿಂದ ಗಾನ-ಲಯ-ಲಾಸ್ಯ ಕಾರ್ಯಕ್ರಮ ನಡೆಯಿತು. ಕಳೆದ 9 ದಿನಗಳಿಂದ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ನಡೆದ “ನವರಾತ್ರಿ ಮಹೋತ್ಸವ” ಸುಸಂಪನ್ನಗೊಂಡಿತು.